Select Your Language

Notifications

webdunia
webdunia
webdunia
webdunia

ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದವರ ಕಂಪ್ಲೀಟ್ ಮಾಹಿತಿ ಬಹಿರಂಗ

Darshan Thoogudeepa

Krishnaveni K

ಬೆಂಗಳೂರು , ಮಂಗಳವಾರ, 6 ಆಗಸ್ಟ್ 2024 (10:59 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನಕ್ಕೊಳಗಾಗಿ ಒಂದೂವರೆ ತಿಂಗಳಾಗಿದೆ. ಇಷ್ಟು ದಿನದಲ್ಲಿ ಅವರನ್ನು ನೋಡಲು ಜೈಲಿಗೆ ಯಾರೆಲ್ಲಾ ಬಂದಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ನಟ ದರ್ಶನ್ ಜೈಲು ಪಾಲಾದ ಬಳಿಕ ಅವರ ಆಪ್ತ ಸಿನಿಮಾ ಸ್ನೇಹಿತರು, ಕುಟುಂಬಸ್ಥರು ಹಲವರು ಅವರನ್ನು ಭೇಟಿ ಮಾಡಲು ಜೈಲಿಗೆ ಬಂದು ಹೋಗಿದ್ದಾರೆ. ಆ ಪೈಕಿ ಅವರ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ ಭೇಟಿಯಾಗಿದ್ದಾರೆ. ಉಳಿದಂತೆ ಯಾರೆಲ್ಲಾ ಭೇಟಿಯಾಗಿದ್ದಾರೆ ಎಂದು ಆರ್ ಟಿಐ ಅರ್ಜಿಯಲ್ಲಿ ಮಾಹಿತಿ ಬಹಿರಂಗವಾಗಿದೆ.

ಕಳೆದ ಒಂದೂವರೆ ತಿಂಗಳಲ್ಲಿ ದರ್ಶನ್ ರನ್ನು ಜೈಲಿನಲ್ಲಿ 30 ಮಂದಿ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಅವರ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ, ಸಹೋದರ ದಿನಕರ್ ತೂಗುದೀಪ ಮೂರು ಬಾರಿ, ನಟ ಧನ್ವೀರ್ ಎರಡು ಬಾರಿ ಭೇಟಿಯಾಗಿದ್ದಾರೆ. ತಾಯಿ ಮೀನಾ ತೂಗುದೀಪ ಒಂದು ಬಾರಿ ಭೇಟಿಯಾಗಿದ್ದಾರೆ.

ಉಳಿದಂತೆ ನಟಿ ರಕ್ಷಿತಾ ಮತ್ತು ಪ್ರೇಮ್ ದಂಪತಿ ಜೂನ್ 29 ರಂದು, ಜುಲೈ 3 ರಂದು ದರ್ಶನ್ ತಾಯಿ, ಜುಲೈ 2 ರಂದು ಸಮತಾ, ಜುಲೈ 10 ರಂದು ಸಂಬಂಧಿ ಸುಶಾಂತ, ಚಂದ್ರಶೇಖರ್, 11 ರಂದು ನಟ ಧನ್ವೀರ್, ಚಂದ್ರಶೇಖರ್, ನಾಗೇಶ್, ಸುನಿಲ್, ಶಿವಕುಮಾರ್ ಭೇಟಿ ಮಾಡಿದ್ದಾರೆ. ಜುಲೈ 19 ರಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಿರ್ದೇಶಕ ತರುಣ್ ಸುಧೀರ್, ಜುಲೈ 26 ರಂದು ನಟ ಸಾಧು ಕೋಕಿಲ ಸೇರಿದಂತೆ 30 ಮಂದಿ ಇದುವರೆಗೆ ದರ್ಶನ್ ರನ್ನು ಭೇಟಿ ಮಾಡಿರುವುದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಾಕ್ಟರೇಟ್ ನಿರಾಕರಿಸಿ ಕಿಚ್ಚ ಸುದೀಪ್ ನೀಡಿದ ಕಾರಣ ಕೇಳಿ ಎಲ್ಲರೂ ಶಾಕ್