Select Your Language

Notifications

webdunia
webdunia
webdunia
webdunia

ಆಸ್ಪತ್ರೆಗೆ ದಾಖಲಾದ ನಟ, ರಾಜಕಾರಣಿ, ಡಿಎಂಡಿಕೆ ಮುಖ್ಯಸ್ಥ ವಿಜಯ್ ಕಾಂತ್

ಆಸ್ಪತ್ರೆಗೆ ದಾಖಲಾದ ನಟ, ರಾಜಕಾರಣಿ, ಡಿಎಂಡಿಕೆ  ಮುಖ್ಯಸ್ಥ ವಿಜಯ್ ಕಾಂತ್
ಚೆನ್ನೈ , ಶನಿವಾರ, 6 ಮಾರ್ಚ್ 2021 (13:07 IST)
ಚೆನ್ನೈ : ಕಾಲಿವುಡ್ ಖ್ಯಾತ ನಟ, ರಾಜಕಾರಣಿ, ಡಿಎಂಡಿಕೆ  ಮುಖ್ಯಸ್ಥ ವಿಜಯ್ ಕಾಂತ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರಂತೆ.

ವಿಜಯ್ ಕಾಂತ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆಪಡೆದು ಗುಣಮುಖರಾಗಿದ್ದರು.

ಆದರೆ ಇದೀಗ ಅವರು ನಂದಂಬಕ್ಕಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ವಿಧಾನಸಭಾ ಚುನಾವಣೆಯ ಸಮೀಪದಲ್ಲಿ ಈ ಸುದ್ದಿ ಡಿಎಂಡಿಕೆ ನಾಯಕರನ್ನು ಚಿಂತೆಗೀಡು ಮಾಡಿದೆ ಎನ್ನಲಾಗಿದೆ. ಆದರೆ ಮಾಹಿತಿ ಪ್ರಕಾರ ಅವರು ಸಾಮಾನ್ಯ ತಪಾಸಣೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ಅವರ 4 ನೇ ಹೆಂಡತಿಯಾಗಲು ಇವರು ರೆಡಿಯಂತೆ!