ಚೆನ್ನೈ : ದಕ್ಷಿಣ ಭಾರತದ ಜನಪ್ರಿಯ ನಟಿ ಶ್ರುತಿ ಹಾಸನ್ ಅವರು ಈ ಹಿಂದೆ ಸಂಗೀತಗಾರ ಮೈಕೆಲ್ ಕೋರ್ಸೇಲ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಆ ಸಂಬಂಧ ಮುರಿದ ಬಳಿಕ ಅವರು ನಟನಾ ವೃತ್ತಿಯನ್ನು ಪುನರಾರಂಭಿಸಿದರು.
ಪ್ರಸ್ತುತ ಅವರು ಸಂತನು ಹಜರಿಕಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆತ ಇತ್ತೀಚೆಗೆ ಚೆನ್ನೈಗೆ ಬಂದಿದ್ದ ವೇಳೆ ಶ್ರುತಿ ಹಾಸನ್ ತಂದೆ ನಟ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದಾರೆ. ಇದೀಗ ಅವರು ಕಮಲ್ ಹಾಸನ್ ಕಲಾಕೃತಿಯನ್ನು ಬಿಡಿಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಮಲ್ ಹಾಸನ್ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಕಮಲ್ ಹಾಸನ್ ಅವರು ಶ್ರುತಿಯವರ ಮತ್ತು ಹಜರಿಕಾ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.