Select Your Language

Notifications

webdunia
webdunia
webdunia
webdunia

ಸೈಬರ್ ವಂಚನೆಗೆ ಬಲಿಯಾಗಿ 66 ಸಾವಿರ ರೂ ಕಳೆದುಕೊಂಡ ನಿರ್ದೇಶಕ

ಸೈಬರ್ ವಂಚನೆಗೆ ಬಲಿಯಾಗಿ 66 ಸಾವಿರ ರೂ ಕಳೆದುಕೊಂಡ ನಿರ್ದೇಶಕ
ಹೈದರಾಬಾದ್ , ಗುರುವಾರ, 4 ಮಾರ್ಚ್ 2021 (10:58 IST)
ಹೈದರಾಬಾದ್ : ‘ಚಲೋ’, ಭೀಷ್ಮಾದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಕ ವೆಂಕಿ ಕುಡುಮುಲಾ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರು 66 ಸಾವಿರ ರೂ. ಕಳೆದುಕೊಂಡಿದ್ದಾರೆ.

ವಂಚಕ ನಿರ್ದೇಶಕ ವೆಂಕಿ ಕುಡುಮುಲಾ ಅವರಿಗೆ ಕರೆ ಮಾಡಿ ಅವರ ನಿರ್ದೇಶನದ ಭೀಷ್ಮಾ ಚಿತ್ರವನ್ನು ಮುಂಬರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ 66 ಸಾವಿರ ರೂ. ಶುಲ್ಕ ಪಾವತಿಸಬೇಕೆಂದು ತಿಳಿಸಿದ್ದಾನೆ. ಆತನ ಮಾತನ್ನು ನಂಬಿದ ನಿರ್ದೇಶಕರು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಆದರೆ ಆತ ಪದೇ ಪದೇ ಹಣ ಕೇಳುತ್ತಿದ್ದಾಗ ಅನುಮಾನಗೊಂಡಿದ್ದಾರೆ.

ಈ ಬಗ್ಗೆ ನಿರ್ದೇಶಕ ವೆಂಕಿ ಕುಡುಮುಲಾ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದು,  ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ ಮನೆ ಹುಡುಕುತ್ತಿರುವ ನಟ ಪ್ರಭಾಸ್