Publish Date: Thu, 04 Mar 2021 (13:21 IST)
Updated Date: Thu, 04 Mar 2021 (13:25 IST)
ಚೆನ್ನೈ : ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆ ಏಪ್ರಿಲ್ 6ರಂದು ನಡೆಯಲಿದ್ದು, ಮೇ2ಕ್ಕೆ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ನಡೆಸುತ್ತಿವೆ.
ಈ ನಡುವೆ ಇದೀಗ ನಿರ್ದೇಶಕ ಸುಂದರ್ ಸಿ ನಿನ್ನೆ ತಮಿಳುನಾಡು ಬಿಜೆಪಿ ನಾಯಕ ಎಲ್.ಮುರುಗನ್ ಅವರನ್ನು ಭೇಟಿಯಾಗಿದ್ದಾರೆ. ಹಾಗಾಗಿ ಅವರು ಪಕ್ಷಕ್ಕೆ ಸೇರುತ್ತಿದ್ದಾರೆ ಎಂಬ ವದಂತಿ ಕೇಳಿಬಂದಿದೆ.
ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದ ಸುಂದರ್ ಪತ್ನಿ ಖುಷ್ಬೂ ಅವರು ಇತ್ತೀಚೆಗೆ ಬಿಜೆಪಿ ಸೇರಿಕೊಂಡು ರಾಷ್ಟ್ರಮಟ್ಟದ ವಕ್ತಾರರಾದರು. ಇದೀಗ ಪತಿ ಪತ್ನಿ ಸೇರಿ ಮುಂಬರುವ ಚುನಾವಣೆ ಎದುರಿಸಲು ಸಿದ್ದರಾಗುತ್ತಾರೆ ಎನ್ನಲಾಗಿದೆ.