ಬೆಂಗಳೂರು: ಕೆಜಿಎಫ್, ಸಲಾರ್ ಮುಂತಾದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸುತ್ತಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಇಂದು ಮತ್ತೊಂದು ಬಿಗ್ ಸಿನಿಮಾ ಘೋಷಣೆ ಮಾಡಲಿದೆ.
ಇಂದು ತನ್ನ ನಿರ್ಮಾಣ ಸಂಸ್ಥೆ 12 ನೇ ಸಿನಿಮಾ ಘೋಷಣೆ ಮಾಡುವುದಾಗಿ ಹೊಂಬಾಳೆ ಫಿಲಂಸ್ ಪ್ರಕಟಣೆ ನೀಡಿದೆ. ಈ ಸಿನಿಮಾದ ಟೈಟಲ್ ಏನು, ನಿರ್ದೇಶಕರು ಯಾರು, ಹೀರೋ ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ನೀಡಲಿದೆ.
ಪ್ರತಿಯೊಬ್ಬರಲ್ಲೂ ಹಸಿವಿದೆ. ಪ್ರತಿ ಅಗುಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ ಎಂದು ಘೋಷ ವಾಕ್ಯದೊಂದಿಗೆ ತನ್ನ ಮುಂದಿನ ಸಿನಿಮಾ ಬಗ್ಗೆ ಹೊಂಬಾಳೆ ಫಿಲಂಸ್ ಸುಳಿವು ಕೊಟ್ಟಿದೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ ಸಿನಿಮಾ ಘೋಷಣೆ ಮಾಡಿದ್ದ ಹೊಂಬಾಳೆ ಫಿಲಂಸ್ ಈಗ ಯಾರ ಜೊತೆ ಸಿನಿಮಾ ಮಾಡಲಿದೆ ಎನ್ನುವ ಕುತೂಹಲವಿದೆ.