Select Your Language

Notifications

webdunia
webdunia
webdunia
webdunia

ನೆಟ್‌ಫ್ಲಿಕ್ಸ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್: ಮತ್ತೆ ಸಂಕಷ್ಟಕ್ಕೆ ಸಿಲುಕಿದ ನಟಿ ನಯನತಾರಾ

ನೆಟ್‌ಫ್ಲಿಕ್ಸ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್: ಮತ್ತೆ ಸಂಕಷ್ಟಕ್ಕೆ ಸಿಲುಕಿದ ನಟಿ ನಯನತಾರಾ

Sampriya

ಚೆನ್ನೈ , ಮಂಗಳವಾರ, 28 ಜನವರಿ 2025 (14:16 IST)
Photo Courtesy X
ಚೆನ್ನೈ: ನಟ ಧನುಷ್ ಅವರು ನಟಿ ನಯನತಾರಾ ವಿರುದ್ಧ ದಾಖಲಿಸಿರುವ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಯನ್ನು ಕೈಬಿಡುವಂತೆ ಕೋರಿ ನೆಟ್‌ಫ್ಲಿಕ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.

ಇದೇ ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ₹10 ಕೋಟಿ ಪರಿಹಾರ ನೀಡುವಂತೆ ನಯನತಾರಾ ಅವರಿಗೆ ಧನುಷ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ನಯನತಾರಾ ಆಕ್ರೋಶ ವ್ಯಕ್ತಪಡಿಸಿದ್ದರು.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ನಟಿ ನಯನತಾರಾ ಬದುಕು ಆಧರಿಸಿದ ಸಾಕ್ಷ್ಯಚಿತ್ರ ನಯನತಾರಾ: ಬಿಯಾಂಡ್‌ ದಿ ಫೇರಿಟೇಲ್‌ನಲ್ಲಿ ತಮ್ಮ ನಾನುಮ್‌ ರೌಡಿ ಧಾನ್‌ ಚಿತ್ರದ ದೃಶ್ಯವನ್ನು ಒಪ್ಪಿಗೆ ಪಡೆಯದೇ ಬಳಸಿದ್ದಾರೆ ಎಂದು ಆರೋಪಿಸಿ ನಟ ಧನುಷ್‌ ಅವರು ನಯನತಾರಾ ಮತ್ತು ಅವರ ಪತಿ, ನಿರ್ದೇಶಕ ವಿಘ್ನೇಶ್‌ ಶಿವನ್‌ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲು ಏರಿದ್ದಾರೆ.

ಈ ಕುರಿತು ಮದ್ರಾಸ್‌ ಹೈಕೋರ್ಟ್ ಫೆಬ್ರುವರಿ 5ರಂದು ಅರ್ಜಿ ವಿಚಾರಣೆ ನಡೆಸಲಿದೆ. ಮೊಕದ್ದಮೆಯಲ್ಲಿ, ಧನುಷ್ ಅವರು ನಯನತಾರಾ ಮತ್ತು ಇತರರು ಚಿತ್ರದ ತುಣುಕನ್ನು ಒಳಗೊಂಡಂತೆ ಚಿತ್ರದ ಮೇಲೆ ನಿರ್ಮಾಣ ಸಂಸ್ಥೆಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸದಂತೆ ಶಾಶ್ವತ ತಡೆಯಾಜ್ಞೆಯನ್ನು ಕೋರಿದ್ದಾರೆ.

ನಾನುಮ್ ರೌಡಿ ಧಾನ್ ಚಿತ್ರವನ್ನು ವಂಡರ್ ಬಾರ್ ಫಿಲ್ಮ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧನುಷ್ 2015ರಲ್ಲಿ ನಿರ್ಮಿಸಿದ್ದರು. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ನಯನತಾರಾ ಕುರಿತಾದ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲಿ ಅನುಮತಿ ಪಡೆಯದೆ ತಮ್ಮ ಚಿತ್ರದ ತುಣುಕನ್ನು ಬಳಸಲಾಗಿದೆ ಎಂಬುದು ಧನುಷ್‌ ಅವರ ಆರೋಪ.

Share this Story:

Follow Webdunia kannada

ಮುಂದಿನ ಸುದ್ದಿ

BBK11: ಬಿಗ್ ಬಾಸ್ ಗೆದ್ದ ಮೇಲೆ ಮೊದಲ ಬಾರಿಗೆ ತವರಿಗೆ ಭೇಟಿ ನೀಡಲಿರುವ ಹನುಮಂತ