ಪೇಜಾವರ ಶ್ರೀಗಳು ಕೋಳಿ ಕೊಟ್ರೆ ತಿನ್ತಾರಾ? ವಿವಾದಕ್ಕೆ ಕಾರಣವಾಯ್ತು ಹಂಸಲೇಖ ಹೇಳಿಕೆ

Webdunia
ಸೋಮವಾರ, 15 ನವೆಂಬರ್ 2021 (10:30 IST)
ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ದಲಿತರ ಮನೆಗೆ ಬಲಿತರು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯೊಂದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹಂಸಲೇಖ ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ವಾಸ್ತವ್ಯ ಹೂಡಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ನೋಡಿದೆ. ದಲಿತರ ಮನೆಗೆ ಅವರು ಹೋಗಬಹುದು. ಆದರೆ ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಅವರು ಕೋಳಿ ಕೊಟ್ರೆ ತಿನ್ತಾರಾ? ಅಥವಾ ಕುರಿ ರಕ್ತ ಫ್ರೈ ಮಾಡಿ ಕೊಟ್ಟರೆ ತಿನ್ತಾರಾ? ಅಲ್ಲಾ ಲಿವರ್ ಫ್ರೈ ಮಾಡಿದ್ರೆ ತಿನ್ತಾರಾ?

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರು ಬಡವರ ಮನೆಗೆ ಹೋಗಿ ವಾಸ್ತವ್ಯ ಹೂಡುವುದನ್ನು ಶುರು ಮಾಡಿದ್ದರು. ಅವರ ಹಿಂದೇ ಇತ್ತೀಚೆಗಿನ ಮಂತ್ರಿಗಳೂ ಗ್ರಾಮ ವಾಸ್ತವ್ಯ ಅಂತ ಮಾಡ್ತಾರೆ? ನನಗೆ ದಲಿತರ ಮನೆಗೆ ಬಲಿತರು ಹೋಗುವುದು ಯಾವ ದೊಡ್ಡ ವಿಷಯ ಎಂದು ಅರ್ಥವಾಗುತ್ತಿಲ್ಲ?’ ಎಂದು ವ್ಯಂಗ್ಯ ಮಾಡಿದ್ದಾರೆ.

ಆದರೆ ಹಂಸಲೇಖ ಹೇಳಿಕೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೀಗಳ ಬಗ್ಗೆ ಇಂತಹಾ ಹೇಳಿಕೆ ಕೊಟ್ಟಿದ್ದು ಅವರ ಭಕ್ತರಿಗೆ ನೋವುಂಟು ಮಾಡಿದೆ. ದಲಿತರು ಯಾಕೆ ಪೇಜಾವರ ಶ್ರೀಗಳಿಗೆ ಕೋಳಿ ಕೊಡಬೇಕು? ಇಂಥಾ ಹೇಳಿಕೆ ಯಾಕೆ ಕೊಡ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಮುಂದಿನ ಸುದ್ದಿ
Show comments