Publish Date: Fri, 19 Nov 2021 (16:54 IST)
Updated Date: Fri, 19 Nov 2021 (16:55 IST)
ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖಗೆ ಪೊಲೀಸರು ಎರಡನೇ ಬಾರಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.
ಬ್ರಾಹ್ಮಣ ಮಹಾಸಭಾ ಹಂಸಲೇಖ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು. ಈ ಸಂಬಂಧ ಈಗಾಗಲೇ ಒಮ್ಮೆ ಹಂಸಲೇಖಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿತ್ತು.
ಆದರೆ ಅವರು ವಿಚಾರಣೆಗೆ ಬಾರದೇ ಇರುವ ಕಾರಣ ಎರಡನೇ ಬಾರಿಗೆ ನೋಟಿಸ್ ನೀಡಲಾಗಿದೆ. ವಿವಾದದ ಬಗ್ಗೆ ಹಂಸಲೇಖ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದರೂ ಬ್ರಾಹ್ಮಣ ಸಮುದಾಯ ಬಹಿರಂಗ ಕ್ಷಮೆ ಕೇಳುವಂತೆ ಒತ್ತಾಯಿಸಿದೆ.