Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ಇಂದು ತ್ರಿಬಲ್ ಧಮಾಕ

ಸ್ಯಾಂಡಲ್ ವುಡ್ ನಲ್ಲಿ ಇಂದು ತ್ರಿಬಲ್ ಧಮಾಕ
ಬೆಂಗಳೂರು , ಶುಕ್ರವಾರ, 19 ನವೆಂಬರ್ 2021 (09:08 IST)
ಬೆಂಗಳೂರು: ಮತ್ತೊಂದು ಶುಕ್ರವಾರ ಬಂದಿದೆ. ಗಾಂಧಿನಗರ ಮತ್ತಷ್ಟು ಹೊಸ ಚಿತ್ರಗಳನ್ನು ಹೊತ್ತು ತಂದಿದೆ. ಇಂದು ಪ್ರಮುಖವಾಗಿ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ.

100: ರಮೇಶ್ ಅರವಿಂದ್ ನಿರ್ದೇಶಿಸಿ, ಅಭಿನಯಿಸಿರುವ ‘100’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ರಚಿತಾ ರಾಂ, ಪೂರ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ಸೈಬರ್ ಕ್ರೈಂ ಆಧಾರಿತ ಕತೆ ಹೊಂದಿದೆ.

ಗರುಡಗಮನ ವೃಷಭ ವಾಹನ: ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಗರುಡಗಮನ ವೃಷಭ ವಾಹನ ಟ್ರೈಲರ್ ನಿಂದಲೇ ಎಲ್ಲರ ಗಮನ ಸೆಳೆದಿದೆ. ಒಂದು ವಿಭಿನ್ನ ಫ್ಲೇವರ್ ನ ಸಿನಿಮಾ ಇದಾಗಿದ್ದು, ರಾಜ್ ಶೆಟ್ಟಿ ಜೊತೆಗೆ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.

ಮುಗಿಲ್ ಪೇಟೆ: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ನಾಯಕರಾಗಿರುವ ರೊಮ್ಯಾಂಟಿಕ್ ಕಥಾ ಹಂದರದ ‘ಮುಗಿಲ್ ಪೇಟೆ’ ಸಿನಿಮಾ ಇಂದು ತೆರೆ ಕಾಣಲಿದೆ. ಚಿತ್ರದಲ್ಲಿ ಮನುರಂಜನ್ ಅದ್ಭುತವಾಗಿ ಸಾಹಸ, ರೊಮ್ಯಾನ್ಸ್, ಅಭಿನಯ ಮಾಡಿದ್ದಾರೆ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ‍್ಳುವ ಗುರಿ ಮನುರಂಜನ್ ರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಮದಗಜ ಟ್ರೈಲರ್ ಇಂದು ರಿಲೀಸ್