Select Your Language

Notifications

webdunia
webdunia
webdunia
Sunday, 13 April 2025
webdunia

ಮೀಟೂ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡ ನಟಿಯರಿಗೆ ವಿಷಕನ್ಯೆಯರು ಎಂದ ಗುರುಪ್ರಸಾದ್

ಬೆಂಗಳೂರು
ಬೆಂಗಳೂರು , ಬುಧವಾರ, 31 ಅಕ್ಟೋಬರ್ 2018 (07:45 IST)
ಬೆಂಗಳೂರು : ಇತ್ತೀಚೆಗೆ ಮೀಟೂ ಹೆಸರಿನಲ್ಲಿ ನಟ ನಿರ್ದೇಶಕ, ನಿರ್ಮಾಪಕರ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಕೆಲವರು ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ಪತಿವ್ರತೆಯವರಂತೆ ಪೋಸ್ ಕೊಡಲು ಹೊರಟ್ಟಿದ್ದಾರೆ. ಗಂಡಸರು ಮಾತಾಡಲು ಶುರು ಮಾಡಿದರೆ, ಅವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.


‘ಕುಷ್ಕಾ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪ್ರಸಾದ್ ಅವರು’ ಇಬ್ಬರು ತಮ್ಮ ಪತಿ, ಅತ್ತೆ, ಮಾವನ ಎದುರಿಗೆ ತಾವು ಪತಿವ್ರತೆಯರು ಅಂತ ಸಾಬೀತುಪಡಿಸಲು ಹೊರಟ್ಟಿದ್ದಾರೆ. ಯಾವಾಗಲೋ ಆಗಿದ್ದನ್ನು ಈಗ ಪ್ರತಿಕ್ರಿಯಿಸುವುದು ಸರಿಯಲ್ಲ. ಅವಕಾಶ ಸಿಗುವಾಗ ಹಾಗೂ ಕೆಲಸ ಮಾಡುವಾಗ ಸುಮ್ಮನಿದ್ದು, ಎರಡು ವರ್ಷಗಳ ನಂತರ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.


ನಟಿ ಸಂಗಿತಾ ಭಟ್ ವಿಚಾರ ಮಾತನಾಡಿದ ಅವರು, ‘ನಟಿ ಸಂಗೀತಾ ಭಟ್ ನೀಡಿರುವ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಎರಡನೇ ಸಲ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿಯೇ ಎಲ್ಲಾ ಹೇಳಿದ್ದೀವಿ. ಬೆನ್ನು ತೋರಿಸುವ ಸೀನ್ ಶೂಟ್ ಮಾಡುವಾಗ ನನ್ನ ಹೆಂಡತಿ ಮತ್ತು ಮಗಳು ಅಲ್ಲೇ ಇದ್ದರು. ಯಾವುದೇ ರೀತಿಯ ಮುಜುಗರ ಆಗುವಂತಹ ಸನ್ನಿವೇಶ ಅಂದು ಆಗಿರಲಿಲ್ಲ ಎಂದು ಹೇಳಿದರು. ಹಾಗೇ ಶೃತಿ ಹರಿಹರನ್ ಬಗ್ಗೆ ಮಾತನಾಡಿದ ಅವರು, ‘ಚಿತ್ರರಂಗದಲ್ಲಿ ಬೆಳೆಯಬೇಕು ಅಂತ ಶೃತಿ ತನ್ನ ಮದುವೆಯ ವಿಷಯವನ್ನೇ ಮುಚ್ಚಿಟ್ಟಿದ್ದರು. ಈಗ ಈ ಬಗ್ಗೆ ನಾನು ಪತಿವ್ರತೆ ಅಂಥ ಸಾಬೀತು ಮಾಡ್ತಿದ್ದಾರಾ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಈ ನಟಿಯರಿಗೆ ವಿಷಕನ್ಯೆಯರು ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಫ್​ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ ಅರ್ಜುನ್ ಸರ್ಜಾ