Select Your Language

Notifications

webdunia
webdunia
webdunia
webdunia

ಎಫ್​ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ ಅರ್ಜುನ್ ಸರ್ಜಾ

ಎಫ್​ಐಆರ್ ರದ್ದುಪಡಿಸುವಂತೆ  ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ ಅರ್ಜುನ್ ಸರ್ಜಾ
ಬೆಂಗಳೂರು , ಬುಧವಾರ, 31 ಅಕ್ಟೋಬರ್ 2018 (07:37 IST)
ಬೆಂಗಳೂರು : ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ನಟ ಅರ್ಜುನ ಸರ್ಜಾ ತಮ್ಮ ವಿರುದ್ಧ ದಾಖಲಾದ ಎಫ್​ಐಆರ್ ರದ್ದುಪಡಿಸುವಂತೆ  ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ನಟಿ ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು  ಅರ್ಜುನ್ ಸರ್ಜಾ ವಿರುದ್ಧ ಎಫ್​ಐಆರ್ ಕೂಡ ದಾಖಲಿಸಿದ್ದಾರೆ.


ಮಂಗಳವಾರ ಅರ್ಜುನ್ ಸರ್ಜಾ ಅವರ ವಕೀಲ ಶ್ಯಾಮ್ ಸುಂದರ್​​ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿ ಸಿಆರ್​​ಪಿಸಿ 482 ಅಡಿ ಎಫ್‌ಐಆರ್ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ಹೈಕೋರ್ಟ್​​ನಲ್ಲಿ ಈ ಅರ್ಜಿಯ ವಾದವನ್ನು ಹಿರಿಯ ವಕೀಲ ಬಿ.ವಿ.ಆಚಾರ್ಯ ನಡೆಸಲಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಲೈಂಗಿಕ ದೌರ್ಜನ್ಯದಿಂದ ಪಾರಾಗಲು ರಾಖಿ ಸಾವಂತ್ ನೀಡಿದ ಹೊಸ ಉಪಾಯವೇನು ಗೊತ್ತಾ?