Select Your Language

Notifications

webdunia
webdunia
webdunia
webdunia

ವಿಕಲಚೇತನರಿಗೂ ಮತದಾನ ಮಾಡಲು ವಿಶೇಷ ಸೌಲಭ್ಯ ಒದಗಿಸಿದ ಚುನಾವಣಾ ಆಯೋಗ

ವಿಕಲಚೇತನರಿಗೂ ಮತದಾನ ಮಾಡಲು ವಿಶೇಷ ಸೌಲಭ್ಯ ಒದಗಿಸಿದ ಚುನಾವಣಾ ಆಯೋಗ
ಬೆಂಗಳೂರು , ಮಂಗಳವಾರ, 30 ಅಕ್ಟೋಬರ್ 2018 (08:59 IST)
ಬೆಂಗಳೂರು : 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೂ ಕೂಡ ಎಲ್ಲರಂತೆ ಮತದಾನ ಮಾಡವ ಹಕ್ಕಿದೆ. ಆದ್ದರಿಂದ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಭಾರತೀಯ ಚುನಾವಣಾ ಆಯೋಗ , ಚುನಾವಣೆ ದಿನ ವಿಕಲಚೇತನರಿಗೆ ವಿಶೇಷ ಸೌಲಭ್ಯವೊಂದನ್ನು ಕಲ್ಪಿಸಿದೆ.


ಆ ಮೂಲಕ ವಿಕಲಚೇತನ ಮತದಾರರಿಗೆ ಮತದಾನದ ದಿನ ಅವರ ಮನೆ ಬಾಗಿಲಿನಿಂದ ಮತಗಟ್ಟೆಗೆ ಕರೆದೊಯ್ದು ಮತ್ತೆ ಅವರ ಮನೆಗೆ ಕರೆತರಲು ಭಾರತೀಯ ಚುನಾವಣಾ ಆಯೋಗ ವಾಹನ ಸೌಲಭ್ಯವನ್ನು ಒದಗಿಸಿದೆ.


ರಾಜ್ಯದಲ್ಲಿ ನಡೆಯುವ ಉಪವಚುನಾವಣೆ ಸಂದರ್ಭದಲ್ಲಿ ಅಂದರೆ ಮತದಾನದ ದಿನ ನವೆಂಬರ್ 3 ರಂದು ಕೂಡ ವಿಕಲಚೇತರಿಗೆ ವಾಹನ ಸೌಕರ್ಯ ಸಿಗಲಿದೆ. ಈ ಮೂಲಕ ವಿಕಲಚೇತನರಿಗೂ ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶವನ್ನು ಚುನಾವಣಾ ಆಯೋಗ  ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಟಿ.ವಿ ರಿಮೋಟ್ ಕೊಡಲಿಲ್ಲ ಎಂಬ ಬೇಸರಕ್ಕೆ ಬಾಲಕಿ ಮಾಡಿದ್ದೇನು ಗೊತ್ತಾ?