Select Your Language

Notifications

webdunia
webdunia
webdunia
webdunia

ತಮ್ಮ ಟಿ.ವಿ ರಿಮೋಟ್ ಕೊಡಲಿಲ್ಲ ಎಂಬ ಬೇಸರಕ್ಕೆ ಬಾಲಕಿ ಮಾಡಿದ್ದೇನು ಗೊತ್ತಾ?

ನವದೆಹಲಿ
ನವದೆಹಲಿ , ಮಂಗಳವಾರ, 30 ಅಕ್ಟೋಬರ್ 2018 (08:55 IST)
ನವದೆಹಲಿ : ತನ್ನ ನೆಚ್ಚಿನ ಶೋ ನೋಡಲು ತಮ್ಮ ಟಿ.ವಿ ರಿಮೋಟ್ ಕೊಡಲಿಲ್ಲ ಎಂಬ ಕಾರಣಕ್ಕೆ 12 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ.


ಪೋಷಕರು ಹೊರಗೆ ಹೋಗಿದ್ದ ವೇಳೆ  ಬಾಲಕಿ ತನ್ನ 7 ವರ್ಷದ ತಮ್ಮ ಹಾಗೂ 17 ವರ್ಷದ ಅಣ್ಣನ ಜೊತೆ ಕುಳಿತು ಟಿವಿ ನೋಡುತ್ತಿದ್ದಳು. ಆಗ ಅಣ್ಣ ಓದಲೆಂದು ಒಳಗೆ ಹೋದ ನಂತರ ಬಾಲಕಿ ತನ್ನ ನೆಚ್ಚಿನ ಶೋ ನೋಡಲು ತನ್ನ ತಮ್ಮನ ಬಳಿ  ಟಿ.ವಿ ರಿಮೋಟ್ ಕೇಳಿದ್ದಾಳೆ . ಆಗ ಆತ ರಿಮೋಟ್ ಕೊಡಲು ನಿರಾಕರಿಸಿದ್ದಕ್ಕೆ ಆತನಿಗೆ ಹೊಡೆದು ಬೆಡ್ ರೂಮಿಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ.


ಇದರಿಂದ ಗಾಬರಿಗೊಂಡ ತಮ್ಮ, ಅಣ್ಣನ ಬಳಿ ತಿಳಿಸಿ ಬಾಗಿಲು ಒಡೆದು ನೋಡಿದಾಗ ಆಕೆ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಳು.  ತಕ್ಷಣ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಡಹಗಲೇ ನಡುರಸ್ತೆಯಲ್ಲಿ ಯುವತಿಗೆ ಕಿರುಕುಳ ನೀಡಿದ ಕಾಮುಕ ಅರೆಸ್ಟ್