ಬೆಂಗಳೂರು : ನಟ ಡಾ ರಾಜ್ ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಖುಲಾಸೆ ಮಾಡಿದ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ಡಾ ರಾಜ್ ಕುಮಾರ್ ಅಪಹರಣ ಪ್ರಕರಣದ ಆರೋಪಿಗಳಾದ ಗೋವಿಂದರಾಜ್, ಅನಂತಿಲ್. ಕುಪ್ಪಸ್ವಾಮಿ, ಪುಸವಣ್ಣ ಅವರನ್ನು 18 ವರ್ಷಗಳ ಕಾಲ ವಿಚಾರಣೆ ನಡೆಸಿದ ತಮಿಳುನಾಡಿನ ಗೋಟಿಚೆಟ್ಟಿಪಾಳ್ಯಂ ಕೋರ್ಟ್ ಖುಲಾಸೆಗೊಳಸಿ ತೀರ್ಪು ನೀಡಿತ್ತು.
ಇದರಿಂದ ಬೇಸರಗೊಂಡ ರಾಜ್ಯ ಸರ್ಕಾರ ಈ ತೀರ್ಪು ಪ್ರಶ್ನಿಸಿ ತಮಿಳುನಾಡು ಹೈಕೋರ್ಟ್ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ