Publish Date: Fri, 04 Feb 2022 (16:01 IST)
Updated Date: Fri, 04 Feb 2022 (16:03 IST)
ಬೆಂಗಳೂರು: ಕೊನೆಗೂ ಚಿತ್ರರಂಗದ ಬೇಡಿಕೆಗೆ ಒಪ್ಪಿಕೊಂಡ ಸರ್ಕಾರ ಥಿಯೇಟರ್ ಗಳಲ್ಲಿ ಶೇ.100 ಆಸನ ಭರ್ತಿಗೆ ನಾಳೆಯಿಂದಲೇ ಗ್ರೀನ್ ಸಿಗ್ನಲ್ ನೀಡಿದೆ.
ಇದುವರೆಗೆ ಕೊರೋನಾ ನಿರ್ಬಂಧಗಳಿಂದಾಗಿ ಥಿಯೇಟರ್ ನಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ಇತ್ತು. ಇದರಿಂದಾಗಿ ಹಲವು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಪೋಸ್ಟ್ ಪೋನ್ ಮಾಡಿಕೊಂಡಿದ್ದವು.
ಆರೋಗ್ಯ ಸಚಿವ ಡಾ. ಸುಧಾಕರ್ ರನ್ನು ಭೇಟಿ ಮಾಡಿದ ವಾಣಿಜ್ಯ ಮಂಡಳಿ ನಿಯೋಗ ಇಂದು ಶೇ.100 ಆಸನಕ್ಕೆ ಅವಕಾಶ ಕೊಡುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ವಾಣಿಜ್ಯ ಮಂಡಳಿ ಮನವಿಗೆ ಸ್ಪಂದಿಸಿರುವ ಸಚಿವರು ಶೇ.100 ಆಸನ ಭರ್ತಿಗೆ ಅವಕಾಶ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಇದರಿಂದ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.