ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿನಯದಲ್ಲಿ ಮೂಡಿಬಂದ ಸೂಪರ್ ಹಿಟ್ 175ನೇ ಸಿನಿಮಾ ಇದೇ ನವೆಂಬರ್ 7ರಂದು ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಮರು ಬಿಡುಗಡೆಯಾಗಲಿದೆ.
ಇನ್ನೂ ವಿಶೇಷತೆ ಏನೆಂದರೆ ಯಜಮಾನ ಸಿನಿಮಾದ ಆಡಿಯೊ ಮತ್ತು ವಿಡಿಯೊ ಗುಣಮಟ್ಟವನ್ನು ತಂತ್ರಜ್ಞಾನದ ಸಹಾಯದಿಂದ ಮತ್ತಷ್ಟು ನವೀಕರಣ ಮಾಡಲಾಗಿದೆ.
ಇದಿಗ ವಿಷ್ಣು ಅಭಿಮಾನಿಗಳಿಗೆ ಸಿನಿಮಾ ರೀ ರಿಲೀಸ್ ಸುದ್ದಿ ಖುಷಿಯನ್ನು ನೀಡಿದೆ. ಈಗಾಗಲೇ ಬುಕ್‌ಮೈ ಶೋನಲ್ಲಿ bookmyshow ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಇದೇ ತಿಂಗಳು 7, 8, 9ರಂದು ಬೆಂಗಳೂರಿನ ಚಿತ್ರಮಂದಿರದಲ್ಲಿ ಯಜಮಾನ ಸಿನಿಮಾವನ್ನು ವೀಕ್ಷಿಸಬಹುದು.
2000ನೇ ಇಸವಿಯಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾದಲ್ಲಿ ವಿಷ್ಣುವರ್ಧನ್, ಶಶಿಕುಮಾರ್, ಪ್ರೇಮಾ, ಅಭಿಜಿತ್, ರಮೇಶ್ ಭಟ್, ಅವಿನಾಶ್, ಪವಿತ್ರ ಲೋಕೇಶ್, ಟೆನಿಸ್ ಕೃಷ್ಣ, ಎಂ.ಎನ್.ಲಕ್ಷ್ಮಿ ದೇವಿ, ಶೋಭರಾಜ್ ಸೇರಿದಂತೆ ದೊಡ್ಡ ತಾರಾಬಳಗವಿದೆ.