ಉಪೇಂದ್ರ ಅಭಿಮಾನಿಗಳಿಗೆ ಗುಡ್‌ನ್ಯೂಸ್, ರೀ ರಿಲೀಸ್ ಆಗಲಿದೆ ರಿಯಲ್ ಸ್ಟಾರ್‌ನ ಸೂಪರ್ ಹಿಟ್ ಸಿನಿಮಾ

Sampriya
ಶುಕ್ರವಾರ, 6 ಸೆಪ್ಟಂಬರ್ 2024 (18:28 IST)
Photo Courtesy X
ಬೆಂಗಳೂರು: ಈಚೆಗೆ ದೊಡ್ಡ ಪರದೆಯಲ್ಲಿ ಉಪೇಂದ್ರ ಅವರ 'ಎ' ಸಿನಿಮಾ ನೋಡಿ ಖುಷಿ ಪಟ್ಟ ಅಭಿಮಾನಿಗಳಿಗೆ ಇದೀಗ ಮತ್ತೇ ಗುಡ್‌ನ್ಯೂಸ್ ಸಿಕ್ಕಿದೆ.

ಕೆಲ ತಿಂಗಳ ಹಿಂದೆ ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ ಎ ಸಿನಿಮಾ ರೀ ರಿಲೀಸ್ ಆಗಿತ್ತು. ಮತ್ತೇ ಥಿಯೇಟರ್‌ನಲ್ಲಿ ಎ ಸಿನಿಮಾ ನೋಡಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದರು. ಇದೀಗ ಮತ್ತೊಮ್ಮೆ ಉಪೇಂದ್ರ ನಟಿಸಿ ನಿರ್ದೇಶಿಸಿರುವ 'ಉಪೇಂದ್ರ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ಉಪೇಂದ್ರ ಅವರು ಇದೇ 18ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ಇದೀಗ ಮತ್ತೇ ರೀ ರಿಲೀಸ್ ಮಾಡಲಾಗುತ್ತಿದೆ.  1999 ರಲ್ಲಿ ಬಿಡುಗಡೆ ಆಗಿದ್ದು ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. ವಿಚಿತ್ರ ಕತೆ, ನಿರೂಪಣಾ ಶೈಲಿ ಹೊಂದಿದ್ದ 'ಉಪೇಂದ್ರ' ಸಿನಿಮಾ ಇಡೀ ಕನ್ನಡಿಗರ ಮನಸ್ಸನ್ನು ಗೆದ್ದಿತು. ಪ್ರಯೋಗಮುಖ ಸಿನಿಮಾಗಳನ್ನು ನೀಡುತ್ತಾ ಬಂದ ಉಪೇಂದ್ರ ಅವರ ಈ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಿನಿಮಾದಲ್ಲಿ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ನಾಯಕಿಯರಾಗಿ ನಟಿಸಿದ್ದರು. ವ್ಯಕ್ತಿಯೊಬ್ಬನ ಜೀವನದಲ್ಲಿ ಹಣ, ಜವಾಬ್ದಾರಿ ಹಾಗೂ ಪ್ರೀತಿ ಎಷ್ಟು ಮುಖ್ಯ ಹಾಗೂ ಅವುಗಳು ವಹಿಸುವ ಪಾತ್ರಗಳ ಬಗ್ಗೆ ಕತೆಯ ಮೂಲಕ ಉಪೇಂದ್ರ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಖಾಕಿ ಉಟ್ಟು ರಿಕ್ಷಾ ಏರಿದ ರಚಿತಾ ರಾಮ್ ನಡೆಗೆ ಫ್ಯಾನ್ಸ್‌ ಫಿದಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಏನೇನು ತಪ್ಪು ಮಾಡಿದ್ದಾರೆ: ನಾಳೆ ದಾಸನಿಗೆ ಮಹತ್ವದ ದಿನ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಮುಂದಿನ ಸುದ್ದಿ
Show comments