ಪೊಲೀಸ್ ತನಿಖೆ ವೇಳೆ ಆರೋ‍ಪಿ ಪವಿತ್ರಾ ಗೌಡ ಕಣ್ಣೀರು

Sampriya
ಶುಕ್ರವಾರ, 6 ಸೆಪ್ಟಂಬರ್ 2024 (17:19 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ  ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿದ್ದ ಹಾಗೇ ಒಂದೊಂದೆ ವಿಷಯಗಳು ಹೊರಬೀಳುತ್ತಿದೆ. ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾಗ ದರ್ಶನ್ ಆಪ್ತೆ ಪವಿತ್ರಾ ಗೌಡ ಕಣ್ಣೀರು ಹಾಕ್ತಿರುವ ಫೋಟೋ ರಿವೀಲ್ ಆಗಿದೆ.

ಪಟ್ಟಣಗೆರೆಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್ ನಡೆಸಿದ ಹಲ್ಲೆ ಹಾಗೂ ತನಿಖೆ ಸಂಬಂಧದ ಕೆಲ ಫೋಟೋಗಳು ರಿವೀಲ್ ಆಗಿತ್ತು. ಅದರಲ್ಲಿ ರೇಣುಕಾಸ್ವಾಮಿ ಪ್ರಾಣ ಭಿಕ್ಷೆ ಬೇಡುತ್ತಿರುವುದು ಹಾಗು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿರುವ ಫೋಟೋ ಹತ್ಯೆಯ ಕರಾಳತೆಯನ್ನು ಬಿಚ್ಚಿಡುತ್ತಿದೆ.  ಸ್ಟೋನಿ ಬ್ರೂಕ್‌ನಲ್ಲಿ ನಟ ದರ್ಶನ್ ಗ್ಯಾಂಗ್ ಮಾಡಿದ ಪಾರ್ಟಿಯನ್ನು ಮರುಸೃಷ್ಟಿ ಮಾಡಿ ಪೊಲೀಸರು ತನಿಖೆ ನಡೆಸಿದ ಫೋಟೋ ಕೂಡಾ ರಿವೀಲ್ ಆಗಿತ್ತು.

ಇದೀಗ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಎದುರಿಸುತ್ತಿರುವ ಫೋಟೋ ರಿವೀಲ್ ಆಗಿದೆ.  ಅದರಲ್ಲಿ ಸಪ್ಪೆ ಮುಖ ಮಾಡಿಕೊಂಡು, ಕಣ್ಣೀರು ಹಾಕುತ್ತಿರುವ ಹಾಗಿದೆ. ಎಪಿನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಎದುರಿಸುತ್ತಿರುವ ಫೋಟೋ ಇದಾಗಿದೆ.

ಇದೀಗ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಆಪ್ತೆ ಪವಿತ್ರಾ ಗೌಡ ಮೊಬೈಲ್ ಸೇರಿದಂತೆ ಹಲವರ ಮೊಬೈಲ್ ಫೋನ್ ರಿಟ್ರೀವ್ ಮಾಡಲಾಗಿದೆ. ಆರೋಪಿಗಳ ಮೊಬೈಲ್‌ನಲ್ಲಿ ರೇಣುಕಾಸ್ವಾಮಿಗೆ ಟಾರ್ಚರ್ ನೀಡಿದ ಫೋಟೋಗಳು ಸಿಕ್ಕಿದೆ ಎನ್ನಲಾಗಿದೆ.

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಫೈನಲ್ ಹಂತಕ್ಕೆ ತಲುಪಿ, ಇದೀಗ ಚಾರ್ಜ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ದರ್ಶನ್ ಅವರು ಪ್ರಕರಣ ಸಂಬಂಧ ಜೈಲು ಸೇರಿ 3 ತಿಂಗಳು ಆಗ್ತಾ ಬಂದಿದೆ.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಹಾನಾ ಸಯ್ಯದ್ ಮದುವೆ ಡೇಟ್ ಫಿಕ್ಸ್‌, ಸರಳ ವಿವಾಹವಾಗಲಿದ್ದಾರೆ ಗಾಯಕಿ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಚಾಮುಂಡಿ ತಾಯಿ ದರ್ಶನ ಪಡೆದು ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ನೋಡಿದ್ರೆ ಹೆಮ್ಮೆ ಅನಿಸಬಹುದು

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಮುಂದಿನ ಸುದ್ದಿ
Show comments