ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನವಾಗಿದ್ದು ತಮ್ಮದೇಶ ಶೈಲಿಯ ಸಿನಿಮಾ ಮೂಲಕ ಫ್ಯಾಮಿಲಿ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟ 46 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಮಾಡಿದ ಒಂದು ತ್ಯಾಗದಿಂದ ಗಣೇಶ್ ಸ್ಟಾರ್ ಆಗಿ ಮಿಂಚಲು ಸಾಧ್ಯವಾಯಿತು.
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಅವಕಾಶ ಗಿಟ್ಟಿಸಿಕೊಂಡವರು. ಬಳಿಕ ಚೆಲ್ಲಾಟ ಸಿನಿಮಾ ಅವರ ವೃತ್ತಿ ಜೀವನಕ್ಕೆ ಒಂದು ತಿರುವು ನೀಡಿತು. ಈ ಸಿನಿಮಾ ಕ್ಲಿಕ್ ಆಗುವುದರ ಮೂಲಕ ಗಣೇಶ್ ಒಂದಷ್ಟು ಹೆಸರು ಮಾಡಿದರು.
ಆದರೆ ಅವರ ಅದೃಷ್ಟ ಖುಲಾಯಿಸಿದ್ದು ಸ್ಟಾರ್ ಪಟ್ಟ ನೀಡಿದ್ದು ಮುಂಗಾರು ಮಳೆ ಸಿನಿಮಾ. ಈ ಸಿನಿಮಾದ ಸ್ಕ್ರಿಪ್ಟ್ ಮೊದಲು ಯೋಗರಾಜ್ ಭಟ್ ತೋರಿಸಿದ್ದು ಪುನೀತ್ ರಾಜ್ ಕುಮಾರ್ ಅವರಿಗೆ. ಆದರೆ ಸಿನಿಮಾದ ಸ್ಕ್ರಿಪ್ಟ್ ಓದಿ ಇದನ್ನು ಯಾರಾದರೂ ಹೊಸಬರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಪುನೀತ್ ಸೂಚಿಸಿದ್ದರಂತೆ.
ಅದೇ ಕಾರಣಕ್ಕೆ ಯೋಗರಾಜ್ ಭಟ್, ಗಣೇಶ್ ಅವರನ್ನು ಸಿನಿಮಾಗೆ ಹಾಕಿಕೊಂಡರು. ಈ ಇಲ್ಲದೇ ಹೋಗಿದ್ದರೆ ಬಹುಶಃ ಗಣೇಶ್ ಗೆ ಇಷ್ಟೊಂದು ನೇಮು-ಫೇಮು ಬರುತ್ತಿರಲಿಲ್ಲವೇನೋ. ಬಹುಶಃ ಅಂದು ಪುನೀತ್ ಈ ಸಿನಿಮಾವನ್ನು ಅವರೇ ಮಾಡಲು ಒಪ್ಪಿಕೊಂಡಿದ್ದರೆ ಗಣೇಶ್ ಗೆ ಅವಕಾಶವೂ ಸಿಗುತ್ತಿರಲಿಲ್ಲ. ಹೀಗಾಗಿ ಪುನೀತ್ ಮಾಡಿದ ತ್ಯಾಗದಿಂದ ಗಣೇಶ್ ಕ್ಲಿಕ್ ಆದರು.