Select Your Language

Notifications

webdunia
webdunia
webdunia
webdunia

ಪವನ್ ಸ್ಪೂರ್ತಿಯಿಂದ ಇಂತಹ ಮಹಾನ್ ಕಾರ್ಯ ಮಾಡಿದ ಐವರು ನಿರ್ಮಾಪಕರು

ಪವನ್  ಸ್ಪೂರ್ತಿಯಿಂದ ಇಂತಹ ಮಹಾನ್ ಕಾರ್ಯ ಮಾಡಿದ ಐವರು ನಿರ್ಮಾಪಕರು
ಹೈದರಾಬಾದ್ , ಸೋಮವಾರ, 15 ಫೆಬ್ರವರಿ 2021 (09:24 IST)
ಹೈದರಾಬಾದ್ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಿನ್ನಲೆಯಲ್ಲಿ ದೇಶಾದ್ಯಂತ ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಈಗಾಗಲೇ ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಅಯೋಧ್ಯೆ ನಿರ್ಮಾಣಕ್ಕಾಗಿ ತಿರುಪತಿಯಲ್ಲಿ ಚೆಕ್ ರೂಪದಲ್ಲಿ 30 ಲಕ್ಷ ರೂ ನೀಡಿದ್ದಾರೆ.

ಪವನ್ ಅವರ ಈ ಕಾರ್ಯದಿಂದ ಪ್ರೇರಿತಗೊಂಡ ಐವರು ನಿರ್ಮಾಪಕರು  ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಭಾರೀ ಕೊಡುಗೆಯನ್ನು ಘೋಷಿಸಿದ್ದಾರೆ. ಪವನ್ ಅವರ ಸ್ನೇಹಿತ ಎ.ಎಂ.ರತ್ನಂ, ಹರಿಕಾ ಮತ್ತು ಹಸಿನಿ ಕ್ರಿಯೇಷನ್ಸ್ ಮುಖ್ಯಸ್ಥ ಎಸ್.ರಾಧಾಕೃಷ್ಣ, ದಿಲ್ ರಾಜು, ನವೀನ್ ಎರ್ನೆನಿ , ಬಾಂದ್ಲಾ ಗಣೇಶ್  ಒಟ್ಟಾಗಿ ಅಯೋಧ್ಯೆ ರಾಮ ಮಂದಿರಕ್ಕೆ 54.31 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹಾಗೇ ಇದಕ್ಕೆ ಪವನ್ ಅವರೇ ಸ್ಪೂರ್ತಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ವಾರ್ ಬಗ್ಗೆ ಧ್ರುವ ಸರ್ಜಾ ಖಡಕ್ ಮಾತು