ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ವಿನ್ನರ್ ಹುಲಿ ಕಾರ್ತಿಕ್ ವಿರುದ್ಧ ತಪ್ಪು ಪದ ಬಳಕೆ ಮಾಡಿದ ಕಾರಣಕ್ಕೆ ಎಫ್ಐಆರ್ ದಾಖಲಾಗಿದೆ.
ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ವಿನ್ನರ್ ಆಗಿದ್ದ ಹುಲಿ ಕಾರ್ತಿಕ್ ತಮ್ಮ ಕಾಮಿಡಿಗಳಿಂದಲೇ ಎಲ್ಲರನ್ನೂ ನಕ್ಕು ನಗಿಸಿದವರು. ಆದರರೆ ಅವರು ಇತ್ತೀಚೆಗೆ ನಡೆದ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾಡಿದ ಸ್ಕಿಟ್ ಒಂದರಲ್ಲಿ ಬಳಸಿದ ಪದ ಪ್ರಯೋಗ ಅವರಿಗೇ ಮುಳುವಾಗಿದೆ.
ತಮ್ಮ ಹಾಸ್ಯದ ಸ್ಕಿಟ್ ನಲ್ಲಿ ಹುಲಿ ಕಾರ್ತಿಕ್ ಬಳಸಿದ ಪದವೊಂದರಿಂದ ಒಂದು ಸಮುದಾಯಕ್ಕೆ ನೋವಾಗಿದೆ. ಈ ಸಂಬಂಧ ಹುಲಿ ಕಾರ್ತಿಕ್ ಮಾತ್ರವಲ್ಲದೆ, ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರ ಮೇಲೂ ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣದಲ್ಲಿ ಹುಲಿ ಕಾರ್ತಿಕ್ ಎ1, ಅನುಬಂಧ ಸ್ಕ್ರಿಪ್ಟ್ ರೈಟರ್ ಎ2, ಅನುಬಂಧ ಡೈರೆಕ್ಟರ್ ಎ3 ಮತ್ತು ಅನುಬಂಧ ನಿರ್ಮಾಕರು ಎ4 ಆಗಿ ದೂರು ದಾಖಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಹಾಸ್ಯದ ಕಾರ್ಯಕ್ರಮಗಳಲ್ಲಿ ಇಂತಹ ಎಡವಟ್ಟುಗಳಾಗುವುದು ಮಾಮೂಲಾಗಿದೆ. ಆದರೆ ಹಾಸ್ಯವೇ ಆದರೂ ಮಾತನಾಡುವಾಗ ಎಚ್ಚರಿಕೆಯಿಂದ ಪದ ಬಳಕೆ ಮಾಡಬೇಕಾದ್ದು ಅಗತ್ಯ.