Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಪ್ರವಾಹ

ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಪ್ರವಾಹ
ಬೆಂಗಳೂರು , ಭಾನುವಾರ, 5 ಏಪ್ರಿಲ್ 2020 (09:18 IST)
ಬೆಂಗಳೂರು: ಕೊರೋನಾದಿಂದಾಗಿ ಚಿತ್ರರಂಗದ ಎಲ್ಲಾ ಚಟುವಟಿಕೆಗಳೂ ಈಗ ಸ್ತಬ್ಧವಾಗಿದೆ. ಆದರೆ ಒಮ್ಮೆ ಲಾಕ್ ಡೌನ್ ಮುಕ್ತವಾದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ಪ್ರವಾಹವೇ ನಡೆಯಲಿದೆ.


ಎರಡು ತಿಂಗಳು ಸಿನಿಮಾ ಚಟುವಟಿಕೆಗಳು ಸ್ತಬ್ಧವಾದ ಹಿನ್ನಲೆಯಲ್ಲಿ ಹಲವು ಚಿತ್ರೀಕರಣಗಳು ಪೂರ್ತಿಯಾಗಬೇಕಿದೆ. ಪ್ರತೀ ವಾರವೂ ಗಾಂಧಿ ನಗರದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲು ಕಾಯುತ್ತಿವೆ.

ಹೀಗಾಗಿ ಲಾಕ್ ಡೌನ್ ಬಳಿಕ ಸ್ಟಾರ್ ನಟರು, ಹೊಸಬರ ಸಿನಿಮಾಗಳು ಒಂದೊಂದಾಗಿ ಬಿಡುಗಡೆಯಾಗಲಿವೆ. ಇದರಲ್ಲಿ ಪ್ರಮುಖವಾಗಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ದರ್ಶನ್ ಅಭಿನಯದ ರಾಬರ್ಟ್, ಧ್ರುವ ಸರ್ಜಾ ಅಭಿನಯದ ಪೊಗರು, ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಮುಂತಾದ ಪ್ರಮುಖ ಸಿನಿಮಾಗಳು ಬಿಡುಗಡೆಗೆ ಕಾದಿವೆ. ಈ ಎಲ್ಲಾ ಸ್ಟಾರ್ ಸಿನಿಮಾಗಳು ಒಟ್ಟಿಗೇ ಬಿಡುಗಡೆಯಾದರೆ ಪರಿಸ್ಥಿತಿ ಹೇಗಿರಬಹುದು ಊಹಿಸಿ. ಆದರೆ ಅನಿವಾರ್ಯವಾಗಿ ಇದನ್ನು ಮಾಡಲೇಬೇಕಾದ ಸ್ಥಿತಿ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಇಫೆಕ್ಟ್: ಸ್ಟಾರ್ ಸುವರ್ಣದಲ್ಲಿ ಡಬ್ಬಿಂಗ್ ಧಾರವಾಹಿಗಳ ಪ್ರದರ್ಶನ