Select Your Language

Notifications

webdunia
webdunia
webdunia
webdunia

ಮುಂದಿನ ವರ್ಷಾರಂಭಕ್ಕೇ ಸಾಲು ಸಾಲು ಸಿನಿಮಾಗಳು

ಮುಂದಿನ ವರ್ಷಾರಂಭಕ್ಕೇ ಸಾಲು ಸಾಲು ಸಿನಿಮಾಗಳು
ಬೆಂಗಳೂರು , ಬುಧವಾರ, 9 ಡಿಸೆಂಬರ್ 2020 (09:14 IST)
ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷವೂ ಮುಗಿಯಲಿದೆ. ಆದರೆ ಈ ವರ್ಷ ಕೊರೋನಾದಿಂದಾಗಿ ಹಲವು ಚಿತ್ರಗಳು ಬಿಡುಗಡೆಯಾಗದೇ ಬಾಕಿಯಾಗಿತ್ತು. ಅವೆಲ್ಲವೂ ಹೊಸ ವರ್ಷವ‍ನ್ನು ಎದುರು ನೋಡುತ್ತಿದೆ.


ಹೀಗಾಗಿ 2021 ರ ವರ್ಷಾರಂಭದಲ್ಲಿ ಹಲವು ಸಿನಿಮಾಗಳು ಬಿಡುಗಡೆಗಾಗಿ ಕ್ಯೂ ನಿಂತಿವೆ. ಅದರಲ್ಲಿ ದರ್ಶನ್ ಅಭಿನಯದ ‘ರಾಬರ್ಟ್’ ಪುನೀತ್ ರಾಜಕುಮಾರ್ ಅವರ ‘ಯುವರತ್ನ’, ಧ್ರುವ ಸರ್ಜಾರ ‘ಪೊಗರು’ ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ. ಅದರ ಜತೆಗೆ ಕೆಜಿಎಫ್ 2 ಕೂಡಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿಕೊಳ್ಳಲಿದೆ. ಹೀಗಾಗಿ ಮುಂದಿನ ವರ್ಷ ನಾಲ್ಕೈದು ತಿಂಗಳ ಅವಧಿ ಸಿನಿ ಪ್ರೇಕ್ಷಕರಿಗೆ ಸೂಪರ್ ಹಿಟ್ ಸಿನಿಮಾಗಳ ಜಾತ್ರೆಯಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಯ ಫೋಟೊ ವೈರಲ್