Select Your Language

Notifications

webdunia
webdunia
webdunia
webdunia

ಮೇಘನಾ ರಾಜ್, ಜ್ಯೂನಿಯರ್ ಚಿರುಗೂ ಕೊರೋನಾ ಪಾಸಿಟಿವ್

ಮೇಘನಾ ರಾಜ್
ಬೆಂಗಳೂರು: ಹಿರಿಯ ನಟಿ ಪ್ರಮೀಳಾ ಜೋಷಾಯ್ ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಪುತ್ರಿ, ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ.
Photo: Google curtosy


ಕೇವಲ ಪ್ರಮೀಳಾ ಜೋಷಾಯ್ ಗೆ ಮಾತ್ರವಲ್ಲ, ಪತಿ, ನಟ ಸುಂದರ್ ರಾಜ್, ಪುತ್ರಿ ಮೇಘನಾ ರಾಜ್, ಅವರ ನವಜಾತ ಪುತ್ರನಿಗೂ ಕೊರೋನಾ ಪಾಸಿಟಿವ್ ಆಗಿದೆ ಎಂದು ಸ್ವತಃ ಮೇಘನಾ ಖಚಿತಪಡಿಸಿದ್ದಾರೆ. ‘ನನ್ನ ತಂದೆ, ತಾಯಿ, ನನಗೆ ಮತ್ತು ಜ್ಯೂನಿಯರ್ ಚಿರುಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ಯಾರೂ ಆತಂಕಪಡಬೇಕಾಗಿಲ್ಲ. ಜ್ಯೂನಿಯರ್ ಚಿರು, ನಾವು ಆರೋಗ್ಯವಾಗಿದ್ದೇವೆ. ಇತ್ತೀಚೆಗೆ ನಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ಆರೋಗ್ಯ ತಪಾಸಣೆಗೊಳಗಾಗಿ. ನಾವು ಕುಟುಂಬಸ್ಥರೆಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡುತ್ತೇವೆ’ ಎಂದು ಮೇಘನಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ಈ ಕನ್ನಡ ಚಿತ್ರದ ರಿಮೇಕಾ?