Publish Date: Wed, 03 Jun 2020 (09:22 IST)
Updated Date: Wed, 03 Jun 2020 (09:25 IST)
ಬೆಂಗಳೂರು: ಲಾಕ್ ಡೌನ್ 5 ನಲ್ಲಿ ಸರ್ಕಾರು ಸಾಕಷ್ಟು ಸಡಿಲಿಕೆ ಮಾಡಿದ್ದರೂ ಸಿನಿಮಾ ಥಿಯಟರ್ ಗಳನ್ನು ತೆರೆಯಲು ಇನ್ನೂ ಒಪ್ಪಿಗೆ ಸಿಕ್ಕಿರಲಿಲ್ಲ. ಹೀಗಾಗಿ ಸಿನಿಮಾಗಳ ಬಿಡುಗಡೆ ಅತಂತ್ರವಾಗಿತ್ತು.
ಆದರೆ ಜೂನ್ 8 ರ ಬಳಿಕ ಸಿನಿಮಾ ಥಿಯೇಟರ್ ಗಳಿಗೂ ಷರತ್ತು ಬದ್ಧವಾಗಿ ತೆರೆಯಲು ಒಪ್ಪಿಗೆ ಸಿಗುವ ಸಾಧ‍್ಯತೆಯಿದೆ. ಹೀಗಾಗಿ ಈಗಲೇ ಥಿಯೇಟರ್ ಗಳು ವೀಕ್ಷಕರ ಸ್ವಾಗತಕ್ಕೆ ಸಿದ್ಧತೆ ನಡೆಸಿವೆ.
ಸಿನಿಮಾ ಹಾಲ್ ಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಶುಚಿತ್ವದ ಕೆಲಸಗಳು ನಡೆಯುತ್ತಿದ್ದು, ಸರ್ಕಾರದ ಆದೇಶವನ್ನೇ ಎದುರು ನೋಡುತ್ತಿದೆ. ಒಂದು ವೇಳೆ ಥಿಯೇಟರ್ ಗಳು ಆರಂಭವಾದರೆ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಕಾದು ನಿಂತಿವೆ.