ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಒಳ್ಳೆ ಹುಡುಗ ಪ್ರಥಮ್ ಗೆ ಕೈ ತುಂಬಾ ಅವಕಾಶಗಳಿವೆ. ಇದನ್ನು ಫೇಸ್ ಬುಕ್ ನಲ್ಲಿ ಹೇಳಿಕೊಳ್ಳಲು ಹೋಗಿ ಪ್ರಥಮ್ ಅಭಿಮಾನಿಗಳಿಂದಲೇ ಬುದ್ಧಿಮಾತು ಹೇಳಿಸಿಕೊಂಡಿದ್ದಾರೆ.
 
ದೊಡ್ಡ ಸ್ಟಾರ್ ಗಳಿರುವ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಕೂಡ್ಲು ರಾಮಕೃಷ್ಣ ನಿರ್ದೇಶಕರು. ಇದೆಲ್ಲಾ ಸೇರಿ ಇದೀಗ ನಾನು ಒಟ್ಟು 7 ಸಿನಿಮಾಗಳಿಗೆ ಸಹಿ ಮಾಡಿದ್ದೇನೆ ಎಂದು ಪ್ರಥಮ್ ಹೇಳಿಕೊಂಡಿದ್ದರು.
									
			
			 
 			
 
 			
			                     
							
							
			        							
								
																	ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಸಹಿ ಮಾಡುವುದು ಮುಖ್ಯವಲ್ಲ. ಚಿತ್ರ ಪೂರ್ತಿಯಾಗಲಿ. ಆಮೇಲೆ ಹೇಳಿ ಎಂದು ಕೆಲವರು ಕಾಲೆಳೆದರೆ ಇನ್ನು ಕೆಲವರು ನಿಮ್ಮ ಅಭಿನಯ  ಇನ್ನೂ ಸುಧಾರಿಸಬೇಕಾದುದು ತುಂಬಾ ಇದೆ ಎಂದು ಬುದ್ಧಿಮಾತು ಹೇಳಿದ್ದಾರೆ. ಒಳ್ಳೆ ಹುಡುಗ ಇವರ ಮಾತೆಲ್ಲಾ ಕೇಳ್ತಾನಾ ಕಾದು ನೋಡಬೇಕು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ