Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ: ಪ್ರತಿಕ್ರಿಯೆ ನೀಡಿದ ಶಿವಣ್ಣ

Actor Shivrajkumar Health, Actor Kiccha Sudeep, Shivanna Health Update

Sampriya

ಬೆಂಗಳೂರು , ಬುಧವಾರ, 18 ಡಿಸೆಂಬರ್ 2024 (18:47 IST)
photo Courtesy Instagram
ಬೆಂಗಳೂರು:  ಮನೆ ಹತ್ತಿರ ಅಭಿಮಾನಿಗಳು ಬರುತ್ತಿದ್ದಾರೆ. ಅದನ್ನು ನೋಡಿ ಎಮೋಷನಲ್ ಆದೆ. ಈಗಾಗಲೇ ಹೆಲ್ತ್ ಚೆಕಪ್ ಮಾಡಿಸಿದ್ದು, ಎಲ್ಲವೂ ಸರಿಯಾಗಿದೆ. ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.

ಅಮೆರಿಕಾಕ್ಕೆ ಚಿಕಿತ್ಸೆಗೆ ತೆರಳುವ ಮುನ್ನಾ ಮಾಧ್ಯಮವದರ ಬಳಿ ಮಾತನಾಡಿದ ಅವರು, ಅಭಿಮಾನಿಗಳನ್ನು ನೋಡಿದಾಗ ದುಃಖ ಆಗುತ್ತದೆ. ಅದು ಬಿಟ್ಟರೆ ನಾನು ಧೈರ್ಯವಾಗಿದ್ದೀನಿ. ಡಿ. 24ರಂದು ನನಗೆ ಸರ್ಜರಿ ನಡೆಯುತ್ತಿದೆ. ಅದರ ಬಗ್ಗೆ ಪಾಸಿಟಿವ್ ಆಗಿದ್ದೀನಿ. ಈ ಬಗ್ಗೆ ನನಗೇನು ಯೋಚನೆ ಇಲ್ಲ ಎಂದು ಶಿವಣ್ಣ ಮಾತನಾಡಿದ್ದಾರೆ.

ಚಿಕಿತ್ಸೆಗಾಗಿ ಕೆಲವು ದಿನಗಳ ಕಾಲ ಮನೆಯಿಂದ ಆಚೆ ಇರುತ್ತೇವೆ. ಇದೇ ಮೊದಲ ಬಾರಿ ನಾನು ಮನೆಬಿಟ್ಟು ಒಂದು ತಿಂಗಳು ಇರುವುದು. ಇನ್ನೂ ಎಲ್ಲಾ ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ. ಇದರಿಂದ ನನಗೆ ಖುಷಿ ಆಗುತ್ತಿದೆ. ಜ.26ಕ್ಕೆ ನಾನು ಬೆಂಗಳೂರಿಗೆ ಹಿಂದಿರುಗುತ್ತಿದ್ದೇನೆ ಎಂದರು.

ಸುದೀಪ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುದೀಪ್ ಬಂದಿದ್ದು ಖುಷಿಯಾಯ್ತು. ಯಾರು ಯೋಚನೆ ಮಾಡುವಂತಹದ್ದು ಏನು ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದರು. ನಂತರ 'ಯುಐ' ಮತ್ತು 'ಮ್ಯಾಕ್ಸ್' ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಎರಡು ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಶಿವಣ್ಣ ಶುಭಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

17ವರ್ಷಗಳ ನಂತರ ಮತ್ತೇ ಒಂದಾಗುತ್ತಾ ಪ್ರಭಾಸ್_ ನಯನತಾರಾ ಜೋಡಿ