ಬೆಂಗಳೂರು: 17 ವರ್ಷಗಳ ನಂತರ ನಯನತಾರಾ ಮತ್ತು ಪ್ರಭಾಸ್ ತೆರೆ ಮೇಲೆ ಮತ್ತೆ ಒಂದಾಗುತ್ತಿದ್ದಾರೆ. ಪ್ರಭಾಸ್ ಅವರ ಮುಂಬರುವ ಚಿತ್ರ ದಿ ರಾಜಾ ಸಾಬ್‌ನಲ್ಲಿ ನಟಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಗಳು ಸೂಚಿಸುತ್ತವೆ.
ಬಹು ನಿರೀಕ್ಷಿತ ಚಿತ್ರದಲ್ಲಿ ನಯನತಾರಾ ಅವರು ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆಂಬ ಸುದ್ದಿಯಿದೆ. ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ಶೀಘ್ರದಲ್ಲೇ ನೃತ್ಯದ ಚಿತ್ರೀಕಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇನ್ನೂ ವಿಭಿನ್ನ ಪಾತ್ರದಲ್ಲಿ ನಟಿಯನ್ನು ನೋಡಲು ಬಯಸುತ್ತಿರುವ ಅವರ ಅಭಿಮಾನಿಗಳಿಗೆ ಇದೀಗ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಮಾಳವಿಕಾ ಮೋಹನನ್, ವರಲಕ್ಷ್ಮಿ ಶರತ್‌ಕುಮಾರ್, ಜಿಶು ಸೇನ್‌ಗುಪ್ತ ಮತ್ತು ಬ್ರಹ್ಮಾನಂದಂ ಸೇರಿದಂತೆ ಪ್ರಭಾವಶಾಲಿ ತಾರಾಗಣವನ್ನು ಹೊಂದಿರುವ ರಾಜಾ ಸಾಬ್ ಏಪ್ರಿಲ್ 10, 2025 ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾವು 17 ವರ್ಷಗಳ ನಂತರ ಪ್ರಭಾಸ್ ಮತ್ತು ನಯನತಾರಾ ಅವರ ಪುನರ್ಮಿಲನವನ್ನು ಸೂಚಿಸುತ್ತದೆ.