Publish Date: Mon, 21 Aug 2017 (12:24 IST)
Updated Date: Mon, 21 Aug 2017 (12:26 IST)
ಬಾದ್ ಶೋ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಇಲಿಯಾನಾ ಜೊತೆ ಅಭಿಮಾನಿಯೊಬ್ಬ ಅಶ್ಲೀಲ ವರ್ತನೆ ತೋರಲಾಗಿದೆ. ಈ ಬಗ್ಗೆ ಇಲಿಯಾನಾ ಟ್ವಿಟ್ಟರ್`ನಲ್ಲಿ ಹೇಳಿಕೊಂಡಿದ್ದಾರೆ.
ನಾನು ಸಮಾಜದ ಜನಪ್ರಿಯ ನಟಿ ಎಂದ ಮಾತ್ರಕ್ಕೆ ಬೇರೆಯವರಿಗೆ ನನ್ನ ಜೊತೆ ಅಶ್ಲೀಲ ವರ್ತನೆ ತೋರುವ ಹಕ್ಕಿಲ್ಲ ಎಂದಿದ್ದಾರೆ. `ಎಂತಹ ಕೊಳಕು ಜಗತ್ತಿನಲ್ಲಿ ನಾವಿದ್ದೇವೆ. ನಾನು ಸಾರ್ವಜನಿಕ ವ್ಯಕ್ತಿ, ಎಲ್ಲರಂತೆ ಸಾರ್ವಜನಿಕವಾಗಿ ಓಡಾಡುವ ಬೇಕಾದಂತೆ ಇರುವ ಸ್ವತಂತ್ರ ನನಗೆ ಇಲ್ಲ ಎಂಬುದು ನನಗೆ ಗೊತ್ತಿದೆ. ಅಂದ ಮಾತ್ರಕ್ಕೆ ನನ್ನ ಜೊತೆಗೆ ದುರ್ವರ್ತನೆ ತೋರುವ ಹಕ್ಕು ಯಾರಿಗೂ ಇಲ್ಲ. ಅಭಿಮಾನವನ್ನ ಗೊಂದಲಕ್ಕೆ ಈಡು ಮಾಡಬೇಡಿ. ಎಲ್ಲದ್ದಕ್ಕೂ ಮೀರಿ ನಾನೊಬ್ಬಳು ಹೆಣ್ಣು ಎಂದು ಇಲಿಯಾನಾ ಹೇಳಿದ್ಧಾರೆ.
ಬಾದ್ ಶೋ ಚಿತ್ರದ ಚಿತ್ರೀಕರಣದ ಸಂದರ್ಭ ಕಾಸ್ಟಿಂಗ್ ಕೌಚ್ ನಡೆದಿತ್ತು ಎಂದು ಹೇಳುವ ಮೂಲಕ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಇಲಿಯಾನಾ, ಇದೀಗ ಅಭಿಮಾನಿಯ ದುರ್ವರ್ತನೆ ಬಗ್ಗೆ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ