Webdunia - Bharat's app for daily news and videos

Install App

ಎಕ್ಸ್ ಕ್ಲೂಸಿವ್: ಜೊತೆ ಜೊತೆಯಲಿ ಧಾರವಾಹಿ ಕಿರಿಕ್ ಬಗ್ಗೆ ನಟ ಅನಿರುದ್ಧ್ ಹೇಳಿದ್ದೇನು?

Krishnaveni K
ಶನಿವಾರ, 20 ಆಗಸ್ಟ್ 2022 (11:34 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಲ್ಲಿ ಬಿರುಕು ಮೂಡಿದೆ, ನಟ ಅನಿರುದ್ಧ್ ಧಾರವಾಹಿಯಿಂದ ಹೊರಗೆ ಬಂದದಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ. ಇದು ಕಿರುತೆರೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ವೆಬ್ ದುನಿಯಾ ಜೊತೆ ಹೇಳಿಕೊಂಡಿದ್ದು ಹೀಗೆ.

ನಾನು ಧಾರವಾಹಿಯಿಂದ ಹೊರಗೆ ಬಂದಿಲ್ಲ. ನಾನು ಎಲ್ಲೂ ಈ ರೀತಿ ಹೇಳಿಕೆ ನೀಡಿಲ್ಲ. ಈಗ ಶೆಡ್ಯೂಲ್ ಬ್ರೇಕ್ ನಡೀತಾ ಇದೆ. ಎರಡು ದಿನಗಳ ಹಿಂದಷ್ಟೇ ಶೂಟಿಂಗ್ ಮುಗಿಸಿದ್ದೇನೆ. ಮತ್ತೆ ಶೂಟಿಂಗ್ ಗೆ ಡೇಟ್ ಕೊಟ್ರೆ ಹೋಗ್ತೀನಿ. ನನಗೆ ಯಾಕೆ ಈ ರೀತಿಯ ವಿವಾದ ಹುಟ್ಟಿಕೊಂಡಿತು ಎಂದು ಗೊತ್ತಿಲ್ಲ. ಧಾರವಾಹಿಯಿಂದ ನನ್ನನ್ನು ಹೊರಗೆ ಹಾಕಲಾಗಿದೆ ಎಂಬ ಮಾಹಿತಿಯನ್ನು ಚಾನೆಲ್ ಅಥವಾ ನಿರ್ಮಾಪಕ ಆರೂರು ಜಗದೀಶ್ ಸರ್ ಕಡೆಯಿಂದ ಆಗಲೀ ಯಾರೂ ನನಗೆ ಇದುವರೆಗೆ ಅಧಿಕೃತವಾಗಿ ನೀಡಿಲ್ಲ. ನಿರ್ಮಾಪಕ ಸಂಘದಿಂದಲೂ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಅಧಿಕೃತ ಹೇಳಿಕೆ ಅಥವಾ ಮಾಹಿತಿ ನೀಡದೇ ನಾನು ಈ ಬಗ್ಗೆ ಏನೇ ಹೇಳಲಿ? ಅಧಿಕೃತ ಹೇಳಿಕೆ ಬಂದರೆ ನಾನು ಅದಕ್ಕೆ ಪ್ರತಿಕ್ರಿಯೆ ನೀಡ್ತೀನಿ.
ಸ್ಕ್ರಿಪ್ಟ್ ವಿಚಾರದಲ್ಲಿ ನಾವೆಲ್ಲರೂ ಭಾಗಿಯಾಗಲೇ ಬೇಕು. ಎಲ್ಲರೂ ಭಾಗಿಯಾಗಿ ನಮ್ಮ ಅಭಿಪ್ರಾಯ ಹೇಳಿದರೆ ಮಾತ್ರ ಒಂದು ಪ್ರಾಜೆಕ್ಟ್ ಚೆನ್ನಾಗಿ ಬರಲು ಸಾಧ್ಯ. ಒಂದು ಮನೆ ಎಂದ ಮೇಲೆ ಸಮಸ್ಯೆಗಳು ಸಹಜ. ಅದೇ ರೀತಿ, ಇಲ್ಲೂ ಸಣ್ಣ ಪುಟ್ಟ ಸಮಸ್ಯೆಗಳಿತ್ತು. ಆದರೆ ಇದೆಲ್ಲಾ ಹೇಗೆ ಹೊರಗೆ ಹೋಯ್ತು, ಇಷ್ಟು ದೊಡ್ಡದಾಯಿತು ಎಂದು ನನಗೆ ಗೊತ್ತಿಲ್ಲ. ಇದನ್ನೆಲ್ಲಾ ಯಾರು ಮಾಡ್ತಿದ್ದಾರೆ ಎಂದೂ ನನಗೆ ಗೊತ್ತಿಲ್ಲ. ದೇವರಿದ್ದಾನೆ, ಎಲ್ಲವೂ ಸರಿಯಾಗುತ್ತದೆ ಎಂದು ನಂಬಿದ್ದೇನೆ.
ಅಭಿಮಾನಿಗಳೇ ನನಗೆ ಶ್ರೀರಕ್ಷೆ. ಅವರ ಅಭಿಮಾನಕ್ಕೆ ನಾನು ಏನು ಹೇಳಲಿ?

ಖಂಡಿತಾ, ನನಗೆ ಯಾವುದೇ ಸಮಸ್ಯೆಯಿಲ್ಲ. ಸದ್ಯಕ್ಕೆ ಬ್ರೇಕ್ ನಡೀತಾ ಇದೆ. ಮುಂದೆ ಡೇಟ್ ಕೊಟ್ಟರೆ ಖಂಡಿತಾ ಹೋಗ್ತೇನೆ. ನಾನಾಗಿ ಧಾರವಾಹಿಯಿಂದ ಹೊರಗೆ ಬಂದಿಲ್ಲ. ಅಧಿಕೃತ ಮಾಹಿತಿ ಬರಲಿಲ್ಲ, ನಾಳೆಯಿಂದ ಶೂಟಿಂಗ್ ಗೆ ಬನ್ನಿ ಎಂದರೆ ಶೂಟಿಂಗ್ ನಲ್ಲಿ ಭಾಗಿಯಾಗ್ತೀನಿ. ಇದುವರೆಗೆ ಚಾನೆಲ್ ನಿಂದ ಮೀಟಿಂಗ್ ಗೆ ಕರೆದಿಲ್ಲ. ಕರೆದಾಗ ಹೋಗ್ತೀನಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗುತ್ತಿದ್ದಂತೇ ನಟಿ ರಮ್ಯಾ ರಿಯಾಕ್ಷನ್ ನೋಡಿ

ವಿಜಯ್ ದೇವರಕೊಂಡ ಸೋಲಿನ ಸರಣಿಯನ್ನು ಕೊನೆಗೊಳಿಸಿದ ಕಿಂಗ್‌ಡಮ್‌: ಗೆಳೆಯನ ಸಕ್ಸಸ್‌ಗೆ ರಶ್ಮಿಕಾ ಫುಲ್ ಹ್ಯಾಪಿ

ದಿ ಕೇರಳ ಸ್ಟೋರಿ ಸಿನಿಮಾಗೆ ರಾಷ್ಟ್ರೀಯ ಮನ್ನಣೆ: ಸಿಎಂ ಸೇರಿದಂತೆ ಹಲವರಿಂದ ಅಸಮಾಧಾನ

ಸು ಫ್ರಮ್ ಸೋ ಸಿನಿಮಾಗೆ ಮಲಯಾಳದಲ್ಲಿ ಹೇಗಿದೆ ರೆಸ್ಪಾನ್ಸ್: ಕನ್ನಡದಲ್ಲಿ ಹೊಸ ದಾಖಲೆ

ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments