Select Your Language

Notifications

webdunia
webdunia
webdunia
webdunia

ಕಾರಣಾಂತರಗಳಿಂದ ಪ್ರಸಾರ ನಿಲ್ಲಿಸುತ್ತಿದೆ ಸೂಪರ್ ಹಿಟ್ ಧಾರವಾಹಿ

ಕಾರಣಾಂತರಗಳಿಂದ ಪ್ರಸಾರ ನಿಲ್ಲಿಸುತ್ತಿದೆ ಸೂಪರ್ ಹಿಟ್ ಧಾರವಾಹಿ
ಬೆಂಗಳೂರು , ಗುರುವಾರ, 18 ಆಗಸ್ಟ್ 2022 (08:22 IST)
ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಸೂಪರ್ ಹಿಟ್ ಧಾರವಾಹಿಯೊಂದು ಸದ್ದಿಲ್ಲದೇ ಮುಕ್ತಾಯ ಕಾಣುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರವಾಹಿ ಇದೀಗ ಫೈನಲ್ ಸಂಚಿಕೆ ಪ್ರಸಾರ ಮಾಡಲಿದೆ. ಸಂಜೆ 6.30 ಕ್ಕೆ ಪ್ರಸಾರವಾಗುತ್ತಿರುವ ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಗಿದಿದ್ದು, ಇನ್ನೀಗ ಕೆಲವೇ ಸಂಚಿಕೆಗಳು ಪ್ರಸಾರವಾಗಲಿದೆ.

ಆರಂಭದಲ್ಲಿ ಉತ್ತಮ ರೇಟಿಂಗ್ ಕಾಯ್ದುಕೊಂಡಿದ್ದ ದೊರೆಸಾನಿ ಇತ್ತೀಚೆಗೆ ತೀರಾ ಕಳಪೆ ಟಿಆರ್ ಪಿ ಪಡೆಯುತ್ತಿದೆ. ಇದಕ್ಕೆ ಸ್ಟೋರಿ ಲೈನ್ ಕೂಡಾ ಕಾರಣ. ಕೇವಲ 202 ಸಂಚಿಕೆಗಳು ಇದುವರೆಗೆ ಪ್ರಸಾರ ಕಂಡಿರುವ ಧಾರವಾಹಿ ಈಗ ಮುಕ್ತಾಯವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಭೇಟಿಯಾಗಿ ಪುನೀತ್ ಸಮಾಧಿ ಅಭಿವೃದ್ಧಿಗೆ ಮನವಿ ಮಾಡಿದ ಡಾ.ರಾಜ್ ಕುಟುಂಬ