Publish Date: Sat, 29 Aug 2020 (11:15 IST)
Updated Date: Sat, 29 Aug 2020 (11:17 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದ್ದು, ಎಲ್ಲಾ ಬಗೆಯಲ್ಲೂ ತನಿಖೆ ಕೈಗೊಂಡಿದೆ.
ಇನ್ನು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿಯನ್ನು ಇಡಿ ಡ್ರಿಲ್ ಮಾಡಿದೆ.
ಬರೋಬ್ಬರಿ 10 ಗಂಟೆ ವಿಚಾರಣೆ ನಡೆಸಿದ್ದು, ನಟ ಸುಶಾಂತ್ ಸಾವಿನ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ.
ಕೇಂದ್ರಿಯ ತನಿಖಾ ತಂಡವು ಮತ್ತೆ ವಿಚಾರಣೆಗಾಗಿ ನಟಿ ರಿಯಾ ಚಕ್ರವರ್ತಿಯನ್ನು ಕರೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.