Webdunia - Bharat's app for daily news and videos

Install App

ಭೀಮಾ ಸೂಪರ್‌ಹಿಟ್‌ ಬೆನ್ನಲ್ಲೇ ಹೊಸ ಸಿನಿಮಾ ಘೋಷಣೆ ಮಾಡಿದ ದುನಿಯಾ ವಿಜಯ್‌

Sampriya
ಮಂಗಳವಾರ, 27 ಆಗಸ್ಟ್ 2024 (13:56 IST)
Photo Courtesy X
ಬೆಂಗಳೂರು: ದುನಿಯಾ ವಿಜಯ್‌ ಅವರು ತಮ್ಮ ಭೀಮಾ ಸಿನಿಮಾ ಸೂಪರ್‌ ಹಿಟ್‌ ಆದ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಚಿತ್ರಮಂದರಿಗಳಲ್ಲಿ ಭೀಮಾ ಚಿತ್ರ ಸದ್ದು ಮಾಡುತ್ತಿರುವಾಗಲೇ ಹೊಸ ಸಿನಿಮಾದ ಶೀರ್ಷಿಕೆಯನ್ನು ಘೋಷಣೆ ಮಾಡಿದ್ದಾರೆ.

ಸಲಗ ಹಾಗೂ ಭೀಮಾ ಸಿನಿಮಾವನ್ನು ವಿಜಯ್‌ ನಿರ್ದೇಶನ ಮಾಡಿದ್ದು, ಎರಡೂ ಚಿತ್ರಗಳು ಅವರಿಗೆ ಯಶಸ್ಸನ್ನು ತಂದುಕೊಂಡಿದೆ. ಇದೀಗ ಆ ಸಿನಿಮಾ ತಂಡವೇ ಈ ಹೊಸ ಸಿನಿಮಾದ ಭಾಗವಾಗಿರಲಿದೆ ಎಂದು ವಿಜಯ್‌ ಹೇಳಿದ್ದಾರೆ.

ಸದ್ಯಕ್ಕೆ ಈ ಸಿನಿಮಾಗೆ ವಿಕೆ 30 ಎಂಬ ಹೆಸರಿನಲ್ಲಿ ಶೀರ್ಷಿಕೆ ಬಿಡುಗಡೆಯಾಗಿದೆ. ವಿಜಯ್‌ ಅವರ 30ನೇ ಸಿನಿಮಾ ಇದಾಗಿದೆ. ಸಿನಿಮಾಗೆ ಆರ್‌ಆರ್‌ ವೆಟ್ರಿ ವೇಲ್‌(ತಂಬಿ) ಆ್ಯಕ್ಷನ್‌ ಕಟ್‌ ಹೇಳಲಿದ್ದು, ಚಿತ್ರದ ಕಥೆಯೂ ಅವರದ್ದೇ ಆಗಿದೆ.

ಸಲಗ ಮತ್ತು ಭೀಮ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರದ ಪೋಸ್ಟರ್‌ ಭಿನ್ನವಾಗಿದ್ದು, ಹೊಸ ಲುಕ್‌ನಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ನಡೆಯುವ ಕಥೆಯಂತಿದೆ ಚಿತ್ರದ ಪೋಸ್ಟರ್‌. ಇದು ಚಿತ್ರದ ಕಥೆಯ ಬಗ್ಗೆಯೂ ಕುತೂಹಲ ಹುಟ್ಟಿಸುವಂತಿದೆ. ಪ್ರಸ್ತುತ ಕಾಟೇರ ಕಥೆಗಾರ ಜಡೇಶ್‌ ಕೆ.ಹಂಪಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ತೊಡಗಿಸಿಕೊಂಡಿದ್ದಾರೆ.

ದುನಿಯಾ ಸಿನಿಮಾ ಮೂಲಕ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ ವಿಜಯ್‌ ಸಿನಿ ಪಯಣಕ್ಕೆ ಸಲಗ ಹಾಗೂ ಭೀಮ ದೊಡ್ಡ ತಿರುವನ್ನೇ ನೀಡಿವೆ. ಕನ್ನಡದ ಜೊತೆಗೆ ಟಾಲಿವುಡ್‌ ಅಂಗಳದಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ವೀರ ಸಿಂಹರೆಡ್ಡಿ ಚಿತ್ರದಲ್ಲಿ ಖಳನಾಯಕನಾಗಿಯೂ ಮಿಂಚಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments