Select Your Language

Notifications

webdunia
webdunia
webdunia
webdunia

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರು? ಡ್ರಗ್ಸ್ ಕಿಂಗ್ ಪಿನ್ ಬಾಯ್ಬಿಟ್ಟ ಸ್ಪೋಟಕ ಸತ್ಯಗಳು!

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರು? ಡ್ರಗ್ಸ್ ಕಿಂಗ್ ಪಿನ್ ಬಾಯ್ಬಿಟ್ಟ ಸ್ಪೋಟಕ ಸತ್ಯಗಳು!
ಬೆಂಗಳೂರು , ಗುರುವಾರ, 27 ಆಗಸ್ಟ್ 2020 (13:25 IST)
ಬೆಂಗಳೂರು: ಬೆಂಗಳೂರಿನಲ್ಲಿ ಸೆಲೆಬ್ರಿಟಿಗಳಿಗೆ, ಸ್ಟಾರ್ ಮಕ್ಕಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಕಿಂಗ್ ಪಿನ್ ಅನಿಕಾ ಎಂಬಾಕೆ ಎನ್ ಸಿಬಿ ಬಲೆಗೆ ಬಿದ್ದಿದ್ದು, ಸ್ಪೋಟಕ ವಿಚಾರಗಳು ಹೊರಬೀಳುತ್ತಿವೆ.

 

ಪ್ರಮುಖ ಸ್ಯಾಂಡಲ್ ವುಡ್ ನಟರು, ಕಿರುತೆರೆ ಕಲಾವಿದರು, ಸಂಗೀತಗಾರರೂ ಈಕೆಯಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ವಿದೇಶಗಳಿಂದಲೂ ಮಕ್ಕಳ ಆಟಿಕೆಗಳ ಬಾಕ್ಸ್ ನಲ್ಲಿ ಡ್ರಗ್ಸ್ ಸರಬರಾಜಾಗುತ್ತಿದ್ದು, ಇದನ್ನು ಇಲ್ಲಿ ಹಂಚಲಾಗುತ್ತಿತ್ತು ಎನ್ನಲಾಗಿದೆ. ಕೆಲವು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೂ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎನ್ನಲಾಗಿದೆ.

ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದನ್ನು ಅಡ್ಡ ಮಾಡಿಕೊಂಡಿದ್ದ ಕಿಂಗ್ ಪಿನ್ ಅನಿಕಾಗೆ ಹಲವರು ಸಹಾಯ ಮಾಡುತ್ತಿದ್ದರು. ಎನ್ ಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದು, ಆಕೆ ಬಾಯ್ಬಿಡುತ್ತಿರುವ ಸ್ಟಾರ್ ಕಲಾವಿದರು, ಅವರ ಮಕ್ಕಳನ್ನೂ ವಿಚಾರಣೆಗೊಳಪಡಿಸುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿಂದು ವಿಶೇಷ ಸಂಭ್ರಮ