ಬೆಂಗಳೂರು: ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ಮದುವೆ ಆಮಂತ್ರಣ ಪತ್ರ ನೀಡುವುದರಲ್ಲಿ ಬ್ಯೂಸಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯಾತಿಗಣ್ಯರಿಗೆ ಮದುವೆಯ ಆಮಂತ್ರಣ ನೀಡಿರುವ ಅವರು ಇಂದು ಸ್ಯಾಂಡಲ್‌ವುಡ್ ಕ್ವೀನ್, ಮಾಜಿ ಸಂಸದೆ ನಟಿ ರಮ್ಯಾ ಅವರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ರಮ್ಯಾ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿರುವ ಧನಂಜಯ್ , ಆ ಫೋಟೋವನ್ನು ರಮ್ಯಾಗೆ ಟ್ಯಾಗ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಎಕ್ಸೈಟೆಡ್ ಫಾರ್ ಯುವರ್ ವೆಡ್ಡಿಂಗ್ ಧನಂಜಯ್ ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಫೆ.16ರಂದು ಡಾಲಿ ಮತ್ತು ಡಾ.ಧನ್ಯತಾ ಮದುವೆ ಹಿನ್ನೆಲೆ ಸ್ಯಾಂಡಲ್ ವುಡ್ ನಟ, ನಟಿಯರು ಹಾಗೂ ರಾಜಕೀಯ ಗಣ್ಯರಿಗೆ ಈಗಾಗಲೇ ಡಾಲಿ ಮದುವೆ ಆಮಂತ್ರಣ ನೀಡಿದ್ದಾರೆ. ಸದ್ಯ ಸಿನಿಮಾ ಕೆಲಸಕ್ಕೆ ಬ್ರೇಕ್ ನೀಡಿ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.