Select Your Language

Notifications

webdunia
webdunia
webdunia
webdunia

ಪತ್ನಿ ಧನಶ್ರೀಯಿಂದ ದೂರವಾದ್ರ ಚಾಹಲ್: ವದಂತಿಗಳ ಬಗ್ಗೆ ಕೊನೆಗೂ ಮೌನಮುರಿದ ಸ್ಪಿನ್ನರ್‌

Cricketer Yajuvendra Chahal

Sampriya

ಮುಂಬೈ , ಶನಿವಾರ, 11 ಜನವರಿ 2025 (18:47 IST)
Photo Courtesy X
ಮುಂಬೈ: ಪತ್ನಿ ಧನಶ್ರೀ ವರ್ಮಾ ಅವರಿಂದ ದೂರವಾಗಿದ್ದಾರೆ ಎಂಬ ವದಂತಿಗಳ ನಡುವೆ ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಶುಕ್ರವಾರ ಸಂಜೆ ಬಿಗ್ ಬಾಸ್ 18 ಸೆಟ್‌ಗಳ ಹೊರಗೆ ಸಹ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್ ಮತ್ತು ಶಶಾಂಕ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡರು.

ನಟ-ನೃತ್ಯ ನಿರ್ದೇಶಕ ಮತ್ತು ಪತ್ನಿ ಧನಶ್ರೀ ವರ್ಮಾ ಅವರಿಂದ ಚಾಹಲ್‌ ದೂರವಾಗಿದ್ದಾರೆ ಎಂಬ ಸುದ್ದಿಗಳು ಹರಿಡಿವೆ. ಈ ಮಧ್ಯೆ ಬಿಗ್ ಬಾಸ್ ಸೆಟ್‌ನ ಹೊರಗೆ ನಿಂತಿರುವ ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದರು.

ಅವರು ಮುಂಬರುವ ವೀಕೆಂಡ್ ಕಾ ವಾರ್ ಸ್ಪೆಷಲ್‌ನ ಭಾಗವಾಗಿರಬಹುದು ಎಂದು ಊಹಾಪೋಹಗಳು ಸೂಚಿಸುತ್ತವೆ. ಬಿಳಿ ಬ್ಯಾಗಿ ಜಾಕೆಟ್‌ನೊಂದಿಗೆ ಸಂಪೂರ್ಣವಾಗಿ ಕಪ್ಪು ಉಡುಪಿನಲ್ಲಿ ಚಾಹಲ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು.

ಏತನ್ಮಧ್ಯೆ, ಸಲ್ಮಾನ್ ಖಾನ್ ನಡೆಸಿಕೊಡುವ ರಿಯಾಲಿಟಿ ಶೋ ಜನವರಿ 19 ರಂದು ತನ್ನ ಅಂತಿಮ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.

ಗುರುವಾರ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದ ಅವರು, ನನಗೆ ಅಚಲವಾದ ಪ್ರೀತಿ ಮತ್ತು ಬೆಂಬಲ ನೀಡಿದ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಪ್ರೀತಿ ಇಲ್ಲದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ. ಆದರೆ, ಈ ಪ್ರಯಾಣವು ಇನ್ನೂ ದೂರವಿದೆ. ಇನ್ನೂ ಅನೇಕ ನಂಬಲಾಗದ ಓವರ್‌ಗಳು ಉಳಿದಿವೆ ಎಂದು ಹೇಳಿದರು.

ವಿಚ್ಛೇದನಕ ಕುರಿತ ವದಂತಿಗಳನ್ನು ಒಪ್ಪಿಕೊಳ್ಳುತ್ತಾ, ಚಾಹಲ್‌ ಪ್ರತಿಕ್ರಿಯಿಸಿ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗಮನಿಸಿದ್ದೇನೆ. ಅದು ನಿಜವಾಗಿರಬಹುದು ಅಥವಾ ನಿಜವಾಗದೇ ಇರಬಹುದು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮತ್ತೊಬ್ಬ ಸ್ಟಾರ್‌ ಆಟಗಾರ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ