Publish Date: Tue, 26 Apr 2022 (08:10 IST)
Updated Date: Tue, 26 Apr 2022 (08:37 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಡಾಲಿ ಧನಂಜಯ್ ಜೊತೆಯಾಗಿ ಸಿನಿಮಾ ಮಾಡಲಿದ್ದಾರಾ? ಹೀಗೊಂದು ಸುದ್ದಿ ಹರಿದಾಡುತ್ತಿದೆ.
ಇದಕ್ಕೆ ಕಾರಣ, ಸುದೀಪ್ ಮತ್ತು ಸ್ನೇಹಿತರೊಂದಿಗೆ ಡಾಲಿ ಧನಂಜಯ್ ಪಾರ್ಟಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ತೋತಾಪುರಿ ಪ್ರೆಸ್ ಮೀಟ್ ನಲ್ಲಿ ಸುದೀಪ್, ಡಾಲಿ ಧನಂಜಯ್ ರನ್ನು ಹೊಗಳಿದ್ದರು.
ಇದರ ಬೆನ್ನಲ್ಲೇ ಈಗ ಸುದೀಪ್ ಮತ್ತು ಬಳಗದ ಜೊತೆ ಧನಂಜಯ್ ಕಾಣಿಸಿಕೊಂಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸುದೀಪ್ ಅಭಿನಯದ ಮುಂಬರುವ ಸಿನಿಮಾ ಅಶ್ವತ್ಥಾಮದಲ್ಲಿ ಧನಂಜಯ್ ಪ್ರಮುಖ ಪಾತ್ರ ಮಾಡಬಹುದು ಎನ್ನಲಾಗುತ್ತಿದೆ.