Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯಗೆ ಹುಟ್ಟುಹಬ್ಬ: ವಯಸ್ಸಾದ್ರೂ ಮದುವೆಯಾಗದ ಸ್ಯಾಂಡಲ್ ವುಡ್ ಮೂವರು ಎಲಿಜಿಬಲ್ ಬ್ಯಾಚುಲರ್ಸ್ ಇವರೇ

Dolly Dhananjay

Krishnaveni K

ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2024 (08:55 IST)
Photo Credit: Facebook
ಬೆಂಗಳೂರು: ನಟ ರಾಕ್ಷಸ ಎಂದೇ ಕರೆಯಿಸಿಕೊಳ್ಳುವ ಡಾಲಿ ಧನಂಜಯ ಇಂದು 38 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಎಲಿಜಿಬಲ್ ಬ್ಯಾಚುಲರ್ಸ್ ಆಗಿರುವ ಸ್ಯಾಂಡಲ್ ವುಡ್ ನಟರ ಪಟ್ಟಿ ಇಲ್ಲಿದೆ.

ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಏನೋ ಸಮ್ ಥಿಂಗ್ ಇದೆ ಎನ್ನುವ ಮಾತು ಬಹಳ ಸಮಯದಿಂದಲೂ ಚಾಲ್ತಿಯಲ್ಲಿದೆ. ಆದರೆ ಇದುವರೆಗೆ ಧನಂಜಯ ತಮ್ಮ ಜೀವನ ಸಂಗಾತಿ ಗುಟ್ಟುಬಿಟ್ಟುಕೊಟ್ಟಿಲ್ಲ. ಎಲ್ಲೇ ಹೋದರೂ ಮದುವೆ ಯಾವಾಗ ಎಂದು ಅವರನ್ನು ಕೇಳುತ್ತಲೇ ಇರುತ್ತಾರೆ. ಆದರೆ ಡಾಲಿ ಆಗೋಣ ಎನ್ನುತ್ತಿದ್ದಾರಷ್ಟೇ ಹೊರತು ಇದುವರೆಗೆ ಹೋಳಿಗೆ ಊಠ ಹಾಕಿಸುವ ಮಾತನಾಡಿಲ್ಲ.

ರಕ್ಷಿತ್ ಶೆಟ್ಟಿ: ಡಾಲಿ ಧನಂಜಯ ಅವರಂತೆಯೇ ವಯಸ್ಸು 40 ದಾಟಿದರೂ ಇನ್ನೂ ಮದುವೆಯಾಗದ ಎಲಿಜಿಬಲ್ ಬ್ಯಾಚುಲರ್ ಎಂದರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಒಮ್ಮೆ ರಶ್ಮಿಕಾ ಮಂದಣ್ಣ ಜೊತೆ ಎಂಗೇಜ್ ಮೆಂಟ್, ಬಳಿಕ ಬ್ರೇಕಪ್ ಆದ ಮೇಲೆ ಲವ್ ಲೈಫ್ ಬಗ್ಗೆ ಕಮಕ್ ಕಿಮಕ್ ಎನ್ನುತ್ತಿಲ್ಲ ಶೆಟ್ರು.

ರಾಜ್ ಬಿ ಶೆಟ್ಟಿ: ಶೆಟ್ರ ಗ್ಯಾಂಗ್ ನಲ್ಲಿರುವ ಮತ್ತೊಬ್ಬ ಎಲಿಜಿಬಲ್ ಬ್ಯಾಚುಲರ್ ಎಂದರೆ ರಾಜ್ ಬಿ ಶೆಟ್ಟಿ. ಇತ್ತೀಚೆಗೆ ಕನ್ನಡ ಮಾತ್ರವಲ್ಲ, ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ನಟನಿಗೆ ಇದುವರೆಗೆ ಮದುವೆಯಾಗಬೇಕು ಅಂತ ಅನಿಸಿಲ್ವಂತೆ. ಆದರೆ ರಾಜ್ ಬಿ ಶೆಟ್ಟಿಗೂ ವಯಸ್ಸು 37 ಆಗಿದೆ.
 ಈ ಮೂವರೂ ತಾರೆಯರು ಆದಷ್ಟು ಬೇಗ ಸಿಹಿ ಸುದ್ದಿ ಕೊಡಲಿ ಎಂದು ಪ್ರೇಕ್ಷಕರೂ ಕಾಯುತ್ತಲೇ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ನೋಡಿ ಕಣ್ಣೀರು ಹಾಕಿದ್ದ ರಚಿತಾ ರಾಮ್ ಬಳಿಕ ನೇರವಾಗಿ ತೆರಳಿದ್ದು ಇಲ್ಲಿಗೆ