Webdunia - Bharat's app for daily news and videos

Install App

ಇವನಿಗೇ ಬೆನ್ನು ನೋವಿದ್ದ ಹಾಗಿದೆ: ನಟ ದರ್ಶನ್ ಟ್ರೀಟ್ ಮಾಡಲು ಬಂದವರು ಟ್ರೋಲ್

Krishnaveni K
ಶನಿವಾರ, 5 ಅಕ್ಟೋಬರ್ 2024 (09:00 IST)
ಬೆಂಗಳೂರು: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಆದರೆ ಅವರ ಬೆನ್ನು ನೋವಿಗೆ ಟ್ರೀಟ್ ಮಾಡಲು ಬಂದಿದ್ದಾರೆ ಎನ್ನಲಾದ ವೈದ್ಯರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು ಫುಲ್ ಟ್ರೋಲ್ ಆಗಿದೆ.

ಬಳ್ಳಾರಿ ಜೈಲಿಗೇ ಬಂದ ವೈದ್ಯರು ದರ್ಶನ್ ತಪಾಸಣೆ ಮಾಡಿದ್ದಾರೆ. ಈ ನಡುವೆ ವೈದ್ಯರೊಬ್ಬರು ಜೈಲು ಕೊಠಡಿಯೊಳಗೆ ಹೋಗುವ ವಿಡಿಯೋ ಹರಿದಾಡುತ್ತಿದೆ. ಆದರೆ ವೈದ್ಯರು ನಡೆಯುವ ಸ್ಟೈಲ್ ನೋಡಿ ನೆಟ್ಟಿಗರು ಫುಲ್ ಟ್ರೋಲ್ ಮಾಡಿದ್ದಾರೆ. ಕೊಂಚ ಬೆನ್ನು ಬಾಗಿಸಿಕೊಂಡು ವೈದ್ಯರು ನಡೆಯುತ್ತಿರುವುದು ನೋಡಿ ಯಾಕೋ ವೈದ್ಯರಿಗೇ ಬೆನ್ನು ನೋವಿದ್ದಂಗಿದೆ ಎಂದಿದ್ದಾರೆ.

ಮತ್ತೆ ಕೆಲವರು ವೈದ್ಯ ಎಂದು ಹೇಳಲಾದ ವ್ಯಕ್ತಿಯ ಡ್ರೆಸ್ ನೋಡಿ ಈತ ವೈದ್ಯ ಎನ್ನುವುದೇ ಅನುಮಾನ ಎಂದಿದ್ದಾರೆ. ಯಾರನ್ನೋ ತೋರಿಸಿ ವೈದ್ಯ ಎನ್ನುತ್ತಿದ್ದೀರಿ ಎಂದು ಕಾಲೆಳೆದಿದ್ದಾರೆ. ನಿಜವಾಗಿಯೂ ಈತ ವೈದ್ಯನೇ ಎನ್ನುವುದು ಖಚಿತವಾಗಿಲ್ಲ. ಆದರೆ ಆತನ ವಿಡಿಯೋ ನೋಡಿ ನೆಟ್ಟಿಗರು ಮಾತ್ರ ಫುಲ್ ಮಜಾ ತಗೊಂಡಿದ್ದಾರೆ.

ಇನ್ನೊಂದೆಡೆ ದರ್ಶನ್ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆಯಾಗಿದ್ದು ಇನ್ನೂ ಕೆಲವು ದಿನ ಅವರಿಗೆ ಜೈಲೇ ಗತಿಯಾಗಿದೆ. ಈ ನಡುವೆ ಅವರಿಗೆ ಬೆನ್ನು ನೋವು ಉಲ್ಬಣಿಸಿದ್ದು, ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ಅವರೀಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರಾಕರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಹಾಡಿಗೆ ದಿಲ್ಜೀತ್ ಗಾಯನ: ರಿಷಬ್ ಶೆಟ್ಟಿ ಮೇಲೆ ಕನ್ನಡಿಗರು ಗರಂ

ರಾಮನ ಪಾತ್ರಕ್ಕೆ ಜೀವನಶೈಲಿಯನ್ನೇ ಬದಲಾಯಿಸಿಕೊಂಡ ರಣಬೀರ್ ಕಪೂರ್

ಅಪ್ಪು ಫೋಟೋ ಬರುತ್ತೆ ಗೋಳೋ ಅಂತ ಅಳ್ತಾರೆ: ಮದುವೆಯಾದ್ರೂ ಅನುಶ್ರೀಗೆ ತಪ್ಪಲಿಲ್ಲ ಟ್ರೋಲ್ ಕಾಟ

ಸೋತ ಘಾಟಿ, ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ ಅನುಷ್ಕಾ ಶೆಟ್ಟಿ

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಕೊಟ್ಟ ಬಳಿಕವೂ ಡಿಕೆ ಶಿವಕುಮಾರ್ ಮರೆಯದ ಹಿರಿಯ ನಟಿಯರು

ಮುಂದಿನ ಸುದ್ದಿ
Show comments