ಬಾಲಿವುಡ್ ನಟ ಸಂಜಯ್ ದತ್ ವಿದೇಶಕ್ಕೆ ಹಾರಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾದ ಬಳಿಕ ನಟ ಸಂಜಯ್ ದತ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಸುತ್ತಿನ ಕೀಮೋಥೆರಪಿಗೆ ಒಳಗಾಗಿದ್ದರು.
ಬಾಲಿವುಡ್ ನಟ ದತ್, ತಮ್ಮ ಪತ್ನಿ ಮಾನ್ಯತಾ ದತ್ ಅವರೊಂದಿಗೆ ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ದತ್ ದಂಪತಿಯ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ ದುಬೈನಲ್ಲಿದ್ದಾರೆ. ಹೀಗಾಗಿ ಅವರನ್ನು ನೋಡಲು ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ಒಂದು ವಾರದ ಬಳಿಕ ದುಬೈನಿಂದ ಸಂಜಯ್ ದತ್, ಮಾನ್ಯತಾ ಸ್ವದೇಶಕ್ಕೆ ಮರಳುವ ಸಾಧ್ಯತೆಯಿದೆ.