Publish Date: Tue, 15 Sep 2020 (22:36 IST)
Updated Date: Tue, 15 Sep 2020 (22:38 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕೇಸ್ ಗೆ ಸಂಬಂಧಿಸಿದಂತೆ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದ ಆರೋಪದ ಮೇರೆಗೆ ಮತ್ತೊಬ್ಬನನ್ನು ಬಂಧನ ಮಾಡಲಾಗಿದೆ.
ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ನಟ ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್, ಸುಶಾಂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ಅವರ ವೈಯಕ್ತಿಕ ಸಿಬ್ಬಂದಿ ದೀಪೇಶ್ ಸಾವಂತ್ ಅವರನ್ನು ಈಗಾಗಲೇ ಬಂಧನ ಮಾಡಿದ್ದಾರೆ.
ಶೋಯಿಕ್ ಚಕ್ರವರ್ತಿಯ ಕಾಲೇಜ್ ಫ್ರೆಂಡ್ ಸೂರ್ಯದೀಪ್ ಮಲ್ಹೋತ್ರಾ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಶಕ್ಕೆ ಪಡೆದ ಒಂದು ದಿನದ ನಂತರ ಬಂಧನ ಮಾಡಲಾಗಿದೆ.