ಒಳ್ಳೆ ಹುಡುಗ ಪ್ರಥಮ್ ರನ್ನೇ ಫಾಲೋ ಮಾಡ್ತಿದ್ದಾರಾ ಕಾಮನ್ ಮ್ಯಾನ್…?

Webdunia
ಶನಿವಾರ, 28 ಅಕ್ಟೋಬರ್ 2017 (17:02 IST)
ಬೆಂಗಳೂರು: ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಒಳ್ಳೆ ಹುಡುಗ ಪ್ರಥಮ್. ಈ ಬಾರಿ ಅದೇ ಸಾಲಿಗೆ ಸೇರುತ್ತಿದ್ದಾರೆ ಕಾಮನ್ ಮ್ಯಾನ್ ದಿವಾಕರ್.

ದೊಡ್ಮನೆಯಲ್ಲಿ ಸೆಲೆಬ್ರಿಟಿ ಹಾಗೂ ಸಾಮಾನ್ಯ ಸ್ಪರ್ಧಿಗಳ ನಡುವೆ ಎರುಡು ವಾರವಾದರೂ ಹೊಂದಾಣಿಕೆ ಕಾಣುತ್ತಿಲ್ಲ. ಈ ವಿಷಯದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವವರು ದಿವಾಕರ್‌. ಸಾಮಾನ್ಯ ಕಂಟೆಸ್ಟಂಟ್ ಆಗಿರುವ ದಿವಾಕರ್, ಎಲ್ಲರ ಗಮನವನ್ನ ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ.

ದಿವಾಕರ್ ಬಿಗ್‌ ಬಾಸ್‌ ನೀಡುವ ಎಲ್ಲಾ ಟಾಸ್ಕ್‌ ನಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಟಾಸ್ಕ್‌ ಮಾತ್ರವಾಗಿದ್ದರೆ ಪರವಾಗಿಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ಜಗಳಗಳಿಂದ ಸುದ್ದಿಯಲ್ಲಿದ್ದಾರೆ. ಒಂದರ್ಥದಲ್ಲಿ ಪ್ರಥಮ್ ರನ್ನೇ ಫಾಲೋ ಮಾಡುತ್ತಿದ್ದಾರೇನೊ ಅನ್ನಿಸಿದ್ದು ಇದೆ.

ಬಿಗ್‌ಬಾಸ್‌ ಮನೆಯಲ್ಲಿ ದಿವಾಕರ್‌ ಟಾರ್ಗೆಟ್‌ ಆಗುತ್ತಿದ್ದಾರೆ. ಮನೆಯಲ್ಲಿರುವ ಸೆಲೆಬ್ರಿಟಿಗಳು ದಿವಾಕರ್‌ ಮೇಲೆ ಒಂದಿಲ್ಲೊಂದು ಕಾರಣಕ್ಕೆ ಹರಿಹಾಯುತ್ತಿದ್ದಾರೆ. ಸಿಹಿ-ಕಹಿ ಚಂದ್ರು, ದಯಾಳು ಪದ್ಮನಾಭ್‌, ಅನುಪಮಾ, ಜೆಕೆ ಸೇರಿದಂತೆ ಎಲ್ಲರೂ ದಿವಾಕರ್‌ ಜತೆ ಜಗಳವಾಡಿದ್ದಾರೆ. ಟಾಸ್ಕ್‌ಗಳಲ್ಲಿ ಕಳಪೆ ಪ್ರದರ್ಶನ ತೋರಿದ ಸ್ಪರ್ಧಿಗಳಿಗೆ ನೀಡುವ ಕಳಪೆ ಪಟ್ಟವನ್ನು ದಿವಾಕರ್‌ ಗೆ ಕಟ್ಟಲು ಕ್ಯಾಪ್ಟನ್ ಶೃತಿ ಮುಂದಾದ್ರು. ಹೀಗಾಗಿ ದಿವಾಕರ್ ಪದೇ ಪದೇ ನನ್ನನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಪ್ರತಿಭಟಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಕಳೆದ ಸೀಸನ್‌ನಲ್ಲಿ ಧೂಳೇಬ್ಬಿಸಿದ ಈ ಜೋಡಿ , ಇನ್ಮುಂದೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಖ್ಯಾತ ಹಾಸ್ಯ ಕಲಾವಿದ ಉಮೇಶ್‌ ಇನ್ನಿಲ್ಲ, ಕಲಾ ಬದುಕಿಗೆ ಎಂಟ್ರಿ ಕೊಟ್ಟಿದೆ ರೋಚಕ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಮುಂದಿನ ಸುದ್ದಿ
Show comments