ಬೆಂಗಳೂರು: ಚಾಮರಾಜಪೇಟೆಯಲ್ಲಿ ದನದ ಮೇಲೆ ಕ್ರೌರ್ಯ ನಡೆಸಿದ ಈ ನನ್ಮಕ್ಳನ್ನು ಪಬ್ಲಿಕ್ ಆಗಿ ಹೊಡೆದು ಸಾಯ್ಸಿಬಿಡ್ಬೇಕು ಎಂದು ನಿರ್ದೇಶಕ ಪ್ರೇಮ್ ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೆಂಗೆ ಹೇಳೋದು ಅಂತ ಗೊತ್ತಾಗ್ತಿಲ್ಲ. ಹುಟ್ಟಿದಾಗ ಪ್ರತಿಯೊಬ್ಬ ವ್ಯಕ್ತಿಯು ತಾಯಿ ಎದೆ ಹಾಲು ಕುಡಿದು ಬೆಳೀತಾನೆ. ಈ ಕಾಮಧೇನು ಅಂದ್ರೆ ದೇವರು. ಪ್ರತಿಯೊಂದು ದೇವರುಗಳು ಕಾಮಧೇನುವಿನ ಬಾಲದಲ್ಲಿರುತ್ತದೆ.
ಹುಲ್ಲು ತಿಂದು ಪ್ಯೂರ್ ಹಾಲು ಕೊಡುತ್ತಾಳೆ. ಅಂತಹ ದನದ ಕೆಚ್ಚಲು ಕೊಯ್ದವನು ತನಗೆ ಎದೆ ಹಾಲು ಕೊಟ್ಟು ಬೆಳೆಸಿದ ತಾಯಿಯ ಎದೆಯನ್ನೇ ಕಟ್ ಮಾಡಬೇಕಿತ್ತು. ಇಂಥಾ ನನ್ಮಕ್ಳು ಸ್ಯಾಡಿಸ್ಟ್ ನನ್ಮಕ್ಳು.
ಇಂತಹವರನ್ನೆಲ್ಲಾ ವಿದೇಶದಲ್ಲಿ ಮಾಡುವ ಹಾಗೆ ಕಂಡಲ್ಲಿ ಗುಂಡಿಕ್ಕಿ ಸಾಯಿಸಿಬಿಡಬೇಕು. ಆದರೆ ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ನಾನು ಮನವಿ ಮಾಡುತ್ತೇನೆ. ನಮ್ಮ ಕರ್ನಾಟಕ ಪೊಲೀಸರು ಸ್ಟ್ರಾಂಗ್ ಆಗಿದ್ದಾರೆ. ಸಾಮಾನ್ಯವಾಗಿ ಇಂತಹವರನ್ನು ಒಳಗೆ ಹಾಕುವಾಗ ಪೊಲೀಸರು ಸ್ವಲ್ಪ ಸ್ವೀಟ್ ತಿನ್ನಿಸಿ ಒಳಗೆ ಕಳಿಸ್ತಾರೆ. ಇವನಿಗೆ ಇನ್ನೂ ಸ್ವಲ್ಪ ಜಾಸ್ತಿ ತಿನಿಸಿ ಕಳುಹಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ ಪ್ರೇಮ್.