Select Your Language

Notifications

webdunia
webdunia
webdunia
webdunia

ಕಲ್ಕಿಗೆ ಉತ್ತಮ ಪ್ರತಿಕ್ರಿಯೆ ಬೆನ್ನಲ್ಲೇ ಸವೆದ ಚಪ್ಪಲಿಯ ಫೋಟೋ ಹಂಚಿದ ನಿರ್ದೇಶಕ ನಾಗ್ ಅಶ್ವಿನ್

Nag Ashwin's Chappals

Sampriya

ಬೆಂಗಳೂರು , ಗುರುವಾರ, 27 ಜೂನ್ 2024 (16:10 IST)
Photo Courtesy X
ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಯುವ ನಿರ್ದೇಶಕರಲ್ಲಿ ನಾಗ್ ಅಶ್ವಿನ್ ಒಬ್ಬರು.  'ಯೇವಡೆ ಸುಬ್ರಹ್ಮಣ್ಯಂ' ಸಿನಿಮಾದ ಮೂಲಕ ಡೈರೆಕ್ಟರ್ ಟೋಪಿ ಧರಿಸಿದ ನಾಗ್ ಅಶ್ವಿನಿ ಅವರಿಗೆ ಈ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತು.  ಇನ್ನೂ ಇವರು ಆ್ಯಕ್ಷನ್ ಕಟ್ ಹೇಳಿದ ನಟಿ ಕೀರ್ತಿ ಸುರೇಶ್ ಅಭಿನಯದ 'ಮಹಾನಟಿ' ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು.

ಸತತ ಎರಡು ಹಿಟ್ ಸಿನಿಮಾಗಳನ್ನು ನೀಡಿದ್ದ ನಾಗ್ ಅಶ್ವಿನ್ ಅವರ ಮೂರನೇ ಸಿನಿಮಾ ಕಲ್ಕಿ ಇಂದು ಬಿಡುಗಡೆಯಾಗಿದೆ. ದೇಶದಾದ್ಯಂತ ಒಳ್ಳೆಯ ಪ್ರಶಂಸೆಯೊಂದಿಗೆ ಪ್ರದರ್ಶನ ಕಾಣುತ್ತಿದ್ದು,  ಸಿನಿಮಾ ನೋಡಿದ ಮಂದಿ ನಿರ್ದೇಶಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲ್ಕಿ ಸಿನಿಮಾ ತಯಾರು ಮಾಡುಲು ಸುದೀರ್ಘ ಕಾಲ ಕೆಲಸ ಮಾಡಿದ ಅಶ್ವಿನ್ ಅವರು ತಾನು ಕಲ್ಕಿ ಚಿತ್ರದೊಂದಿಗೆ ನಡೆಸಿದ ತನ್ನ ಪ್ರಯಾಣವನ್ನು ತೋರಿಸಿಲು ತಮ್ಮ ಸವೆದ ಚಪ್ಪಲಿಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.  

"ಇದು ಸುದೀರ್ಘ ರಸ್ತೆಯಾಗಿದೆ," ಅವರು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಾಗ್ ಅಶ್ವಿನ್ ಅವರು ಕಲ್ಕಿ ಸಿನಿಮಾ ತಯಾರು ಮಾಡಲು ತಾನು ಪಟ್ಟ ಶ್ರಮವನ್ನು ಫೋಟೋ ಹಂಚಿಕೊಳ್ಳುವ ಮೂಲಕ ತೋರಿಸಿದ್ದಾರೆ.

ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡ ಮಗ ದರ್ಶನ್ ಜೈಲಲ್ಲಿರಬೇಕಾದರೆ ಅಭಿಷೇಕ್ ಫೋಟೋ ಸ್ಟೇಟಸ್ ಹಾಕಿಕೊಂಡ ಸುಮಲತಾ ಹೇಳಿದ್ದು ಹೀಗೆ