ಚೆನ್ನೈ : ಲೋಕೇಶ್ ಕನಗರಾಜ್ ನಿರ್ದೇಶನದ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 3ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಚಿತ್ರಕ್ಕೆ ಜನರಿಂದ, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತಮಿಳುನಾಡಿನಲ್ಲಿ ಮಾತ್ರವಲ್ಲ ಇತರ ರಾಜ್ಯಗಳಲ್ಲೂ ಜನರ ಮೆಚ್ಚುಗೆ ಪಡೆದಿದೆ. ಈ ವೇಳೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಸಂದರ್ಶನವೊಂದರಲ್ಲಿ ನಾನು ಮತ್ತೆ ವಿಜಯ್ ಅವರೊಂದಿಗೆ ಕೆಲಸ ಮಾಡುತ್ತೇನೆ. ಅದು ಮಾಸ್ಟರ್ 2 ಆಗುವುದಿಲ್ಲ. ಇದು ಚಿತ್ರದ ಮುಂದಿನ ಭಾಗವಾಗಿದೆ ಎಂದು ಹೇಳಿದ್ದಾರೆ.