Select Your Language

Notifications

webdunia
webdunia
webdunia
webdunia

ಫಾರ್ಮ್ ಹೌಸ್ ಗೆ ತೆರಳಿದ್ದ ರಜನೀಕಾಂತ್ ಇ-ಪಾಸ್ ಪಡೆದಿದ್ದಾರೆಯೇ? ನೆಟ್ಟಿಗರಿಂದ ಅನುಮಾನ

ಫಾರ್ಮ್ ಹೌಸ್ ಗೆ ತೆರಳಿದ್ದ ರಜನೀಕಾಂತ್ ಇ-ಪಾಸ್ ಪಡೆದಿದ್ದಾರೆಯೇ?  ನೆಟ್ಟಿಗರಿಂದ ಅನುಮಾನ
ಚೆನ್ನೈ , ಶುಕ್ರವಾರ, 24 ಜುಲೈ 2020 (11:55 IST)
Normal 0 false false false EN-US X-NONE X-NONE

ಚೆನ್ನೈ : ಕಾಲಿವುಡ್ ನ ಖ್ಯಾತ ನಟ ರಜನೀಕಾಂತ್ ಮಾಸ್ಕ್ ಧರಿಸಿ ತಮ್ಮ ಐಷಾರಾಮಿ ಕಾರ್ ನಲ್ಲಿ ಡ್ರೈವ್ ಮಾಡುತ್ತಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆದರೆ ರಜನೀಕಾಂತ್ ಇ-ಪಾಸ್ ಪಡೆದಿದ್ದಾರೆಯೇ? ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.
 

ಲಾಕ್ ಡೌನ್ ಹಿನ್ನಲೆಯಲ್ಲಿ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಈಗಲೂ ಇ-ಪಾಸ್ ಬಳಕೆ ಕಡ್ಡಾಯವಾಗಿದೆ. ಆದರೆ ರಜನೀಕಾಂತ್ ಮಗಳು , ಅಳಿಯ, ಮೊಮ್ಮಗನ  ಜೊತೆ ಕೆಳಂಬಕ್ಕಮ್ ಫಾರ್ಮ್ ಹೌಸ್ ಗೆ ಕಾರ್ ನಲ್ಲಿ ತೆರಳಿದ್ದರು. ಹಾಗೇ ಅಲ್ಲಿ ವಾಯುವಿಹಾರ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದಕ್ಕೆ ನೆಟ್ಟಿಗರು ರಜನೀಕಾಂತ್ ಇ-ಪಾಸ್ ಪಡೆದಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡುವುದಾಗಿ ಚೆನ್ನೈ ನ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರ ವಿಮರ್ಶೆ:ಫ್ರೆಂಚ್ ಬಿರಿಯಾನಿ ಸೇವಿಸಿದ ಪ್ರೇಕ್ಷಕರು ಏನಂತಿದ್ದಾರೆ?