Select Your Language

Notifications

webdunia
webdunia
webdunia
webdunia

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಬಲು ದುಬಾರಿ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಬಲು ದುಬಾರಿ!
ಬೆಂಗಳೂರು , ಶುಕ್ರವಾರ, 6 ನವೆಂಬರ್ 2020 (10:22 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಬಲು ‘ದುಬಾರಿ’ ವ್ಯಕ್ತಿ! ಆದರೆ ಸಂಭಾವನೆ ವಿಚಾರದಲ್ಲಿ ಅಲ್ಲ. ಸಿನಿಮಾ ವಿಚಾರದಲ್ಲಿ ಅವರೀಗ ‘ದುಬಾರಿ’ಯಾಗುತ್ತಿದ್ದಾರೆ.


ಧ್ರುವ ಸರ್ಜಾ ನಾಯಕಾರಲಿಗಲಿರುವ ನಂದಕಿಶೋರ್ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ಇಂದು ಬೆಳಿಗ್ಗೆ ನಗರದ ದೇವಾಲಯವೊಂದರಲ್ಲಿ ನೆರವೇರಿದೆ. ಈ ಸಿನಿಮಾದ ಟೈಟಲ್ ‘ದುಬಾರಿ’ ಎಂದು ಫಿಕ್ಸ್ ಆಗಿದೆ. ಈಗಾಗಲೇ ಧ್ರುವ ಭರ್ಜರಿ, ಅದ್ಧೂರಿ ಮುಂತಾದ ರಿ ಅಕ್ಷರದಿಂದ ಅಂತ್ಯವಾಗುವ ಟೈಟಲ್ ಇಟ್ಟುಕೊಂಡು ಯಶಸ್ವೀ ಸಿನಿಮಾಗಳನ್ನು ಕೊಟ್ಟಿದ್ದರು. ಇದೀಗ ದುಬಾರಿ ಎನ್ನುವ ಟೈಟಲ್ ನೊಂದಿಗೆ ಬರುತ್ತಿದ್ದಾರೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬದಲಾವಣೆಯೊಂದಿಗೆ ಇಂದು ದಿಯಾ ಸಿನಿಮಾ ಮರುಬಿಡುಗಡೆ