Publish Date: Fri, 06 Nov 2020 (10:19 IST)
Updated Date: Fri, 06 Nov 2020 (10:20 IST)
ಬೆಂಗಳೂರು: ಲಾಕ್ ಡೌನ್ ಗೂ ಮೊದಲು ಸದ್ದು ಮಾಡಿದ್ದ ಹೊಸಬರ ದಿಯಾ ಸಿನಿಮಾ ಇಂದು ಮತ್ತೆ ಬಿಡುಗಡೆಯಾಗುತ್ತಿದೆ.
ಆದರೆ ಈ ಬಾರಿ ಕೆಲವು ಬದಲಾವಣೆಯೊಂದಿಗೆ ಬಿಡುಗಡೆಯಾಗಲಿದೆ. ಎಲ್ಲಾ ಸರಿ ಹೋಗಿದ್ದರೆ ದಸರಾ ಸಂದರ್ಭದಲ್ಲಿ ಈ ಸಿನಿಮಾ ಮರುಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಇದೀಗ ಹೊಸ ಹಾಡೊಂದು ಸಿನಿಮಾದಲ್ಲಿ ಸೇರ್ಪಡೆಯಾಗಿದ್ದು, ಕ್ಲೈಮ್ಯಾಕ್ಸ್ ಕೂಡಾ ಕೊಂಚ ಬದಲಾವಣೆಯಾಗಿದೆ ಎನ್ನಲಾಗಿದೆ.