Select Your Language

Notifications

webdunia
webdunia
webdunia
webdunia

ಬರ್ತ್ ಡೇ ಆಚರಿಸಿಕೊಳ್ಳದಿರಲು ಎರಡು ಕಾರಣ ಕೊಟ್ಟ ಧ್ರುವ ಸರ್ಜಾ

ಬರ್ತ್ ಡೇ ಆಚರಿಸಿಕೊಳ್ಳದಿರಲು ಎರಡು ಕಾರಣ ಕೊಟ್ಟ ಧ್ರುವ ಸರ್ಜಾ
ಬೆಂಗಳೂರು , ಮಂಗಳವಾರ, 5 ಅಕ್ಟೋಬರ್ 2021 (09:46 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಎರಡು ಪ್ರಮುಖ ಕಾರಣ ನೀಡಿದ್ದಾರೆ.


ಈ ಬಗ್ಗೆ ವಿಶೇಷ ವಿಡಿಯೋ ಸಂದೇಶ ನೀಡಿರುವ ಧ್ರುವ ನನಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡುವ ಮನಸ್ಸಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರಮುಖವಾಗಿ ಎರಡು ಕಾರಣವೆಂದರೆ ಒಂದು ಕೊವಿಡ್. ಜನ ಸೇರುವುದು ಅಪಾಯ ಎಂಬ ಕಾರಣಕ್ಕೆ ಸೆಲಬ್ರೇಷನ್ ಮಾಡಲ್ಲ. ಇನ್ನೊಂದು ಕಾರಣವೆಂದರೆ ಆ ದಿನ ನಾನು ಊರಲ್ಲಿ ಇರಲ್ಲ. ವಿಶಾಖಪಟ್ಟಣಂಗೆ ಶೂಟಿಂಗ್ ಗೆ ತೆರಳುತ್ತಿದ್ದೇನೆ. ಅಭಿಮಾನಿಗಳ ಬಳಗ ಹೊಂದಿರವಷ್ಟು ದೊಡ್ಡವನು ನಾನಲ್ಲ. ಆದರೂ ನನಗಿರುವ ಚಿಕ್ಕ ವಿಐಪಿಗಳ ಸಮೂಹಕ್ಕೆ ನಾನು ಈ ಮನವಿ ಮಾಡುತ್ತಿದ್ದೇನೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಯನ್ ಖಾನ್ ಡ್ರಗ್ ಕೇಸ್: ಡ್ರಗ್ ಖರೀದಿಗೆ ಬಿಟ್ ಕಾಯಿನ್ ಬಳಕೆ?